23.5 C
Karnataka
Thursday, April 3, 2025

ಮಂಗಳೂರು ಲಿಟ್ ಫೆಸ್ಟ್: ಸಿರಿ ವೈಭವ ವಿಚಾರಗೋಷ್ಠಿ

ಮಂಗಳೂರು : ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಆರನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ತುಳು ಮಹಾಕಾವ್ಯ ಸಿರಿ ಆಧಾರಿತ ವಿಚಾರಗೋಷ್ಠಿ ಸಿರಿ ವೈಭವ ಜರಗಿತು.
ತುಳು ಮಹಾಕಾವ್ಯ ಸಿರಿ ಆಧಾರಿತ ವಿಚಾರಗೋಷ್ಠಿ ಸಿರಿ ವೈಭವದಲ್ಲಿ ಡಾ ಗಾಯತ್ರಿ ನಾವಡ ಮತ್ತು ರವೀಶ್ ಪಡುಮಲೆ ತಮ್ಮ ಅಭಿಪ್ರಾಯವನ್ನಿಟ್ಟರು ಮತ್ತು ವಿವೇಕಾದಿತ್ಯ ನಿರ್ವಹಿಸಿದರು
ಡಾ ಗಾಯತ್ರಿ ನಾವಡ ಅವರು ಮಾತನಾಡಿ ಸಿರಿ ಮಹಾಕಾವ್ಯವು ಸ್ತ್ರೀ ಸಂವೇದನೆ, ಸ್ವಾತಂತ್ರ್ಯದ ಪ್ರತೀಕವಾಗಿದೆ. ಸಿರಿಯು ಸ್ತ್ರೀತನಕ್ಕೆ ಆತ್ಮಶಕ್ತಿಯಾಗಿದ್ದಾಳೆ, ಮಾದರಿಯಾಗಿದ್ದಾಳೆ. ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನ ಎದುರಿಸಿ ಹೆಣ್ಣು ನಮಗೆ ಮಾದರಿಯಾಗಿ, ಲಿಂಗರಾಜಕಾರಣದಿಂದ ಎದ್ದು ಬಂದ ಕಾರಣ ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಾಳೆ. ಸಿರಿಜಾತ್ರೆಯಲ್ಲಿ ನಾವು ಗಮನಿಸುವುದು ಸಿರಿಪಾತ್ರಧಾರಿಯಾದವರಿಗೆ ಅನುಭಾವಿಕ ಲೋಕವೊಂದು ಸೃಷ್ಟಿಯಾಗುತ್ತದೆ. ಭಾರತೀಯ ಮತ್ತು ಪಾಶ್ಚಾತ್ಯ ಸ್ತ್ರೀವಾದದಲ್ಲಿ ನಮಗೆ ಕಾಣುವುದು ಸಂಪೂರ್ಣ ತದ್ವರುದ್ಧವಾದ ಆಲೋಚನೆಗಳು. ಭಾರತೀಯ ಕರಾವಳಿಯ ಸಂಸ್ಕೃತಿಯಲ್ಲಿ ಮಹಿಳೆ ಮಾತೃ ರೂಪಿಯಾಗಿ ಕಾಣಿಸುತ್ತಾಳೆ, ಇದುವೇ ನಮ್ಮ ವಿಶೇಷತೆ ಎಂದರು.
ಈಗಿರುವ ತುಳುನಾಡಿನ ಎಲ್ಲಾ ಆಚರಣೆಗಳು ಹಿರಿಯರ ಮಾರ್ಗದರ್ಶನದಿಂದಲೇ ನಡೆದುಕೊಂಡು ಬಂದಿದೆ. ಅದಕ್ಕೇ ನಮ್ಮ ಪ್ರಾಮುಖ್ಯತೆ. ಬೇರೆ ಯಾವ ದೈವಾರಾಧನೆಗೂ ಸಿರಿಯ ಆರಾಧನೆಗೂ ಸ್ಪಷ್ಟ ವ್ಯತ್ಯಾಸವಿದೆ. ತುಳುನಾಡಿನ ವಿವಿಧ ಪ್ರದೇಶಗಳಲ್ಲಿ ಸಿರಿ ಜಾತ್ರೆ, 7 ಸಿರಿಯರು ಮತ್ತು ಕುಮಾರನ ಆರಾಧನೆಗಳಲ್ಲಿ ಪ್ರತ್ಯೇಕತೆಗಳಿವೆ. ದಬ್ಬಾಳಿಕೆಗಳೆಲ್ಲವನ್ನು ಮೀರಿ ಸಿರಿ ಹೊರಬಂದಿರುವುದು ಒಂದು ಶಕ್ತಿ ಎಂದು ರವೀಶ್ ಪಡುಮಲೆ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles