34.2 C
Karnataka
Saturday, April 19, 2025

ಹೇರ್ ಕಟಿಂಗ್ ಶಾಪಿಗೆ ನುಗ್ಗಿ ಟಿವಿ ಕದ್ದಾತನ ಸೆರೆ

ಮೂಡುಬಿದಿರೆ:ಮೂಡುಬಿದಿರೆಯ ಹೇರ್ ಕಟಿಂಗ್ ಶಾಪ್‌ ವೊ೦ದಕ್ಕೆ ನುಗ್ಗಿ ಟಿವಿ ಕದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬ೦ಧಿಸಿದ್ದಾರೆ.ಮೂಡುಬಿದಿರೆ ತಾಲೂಕು ಪುಚ್ಚಮೊಗರು ಗ್ರಾಮದ ಮಿತ್ತಬೈಲ್ ನಿವಾಸಿಹರೀಶ್ ಪೂಜಾರಿ (46) ಬ೦ಧಿತ ಆರೋಪಿ.
ಜ.8 ರ೦ದು ರಾತ್ರಿ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿರುವ ಹೇರ್ ಕಟಿಂಗ್ ಶಾಪ್‌ ವೊ೦ದಕ್ಕೆ ಯಾರೋ ಕಳ್ಳರು ಅಂಗಡಿಯ ಹಿಂದಿನ ಗೋಡೆಯಲ್ಲಿ ಕನ್ನ ಕೊರೆದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ Sony ಕಂಪನೀಯ ಸುಮಾರು 40 ಇಂಚು ಅಗಲದ LED- T.V ಹಾಗೂ 1000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಮೂಡಬಿದ್ರೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
ಮೂಡುಬಿದಿರೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪೊಲೀಸರು ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಹರೀಶ್ ಪೂಜಾರಿಯನ್ನು
ಬಂಧಿಸಿ ಆರೋಪಿಯಿಂದ ಕಳ್ಳತನಕ್ಕೆ ಉಪಯೋಗಿಸಿದ್ದ ಹೋಂಡ ಕಂಪನೀಯ ಆಕ್ಟಿವಾ ಸ್ಕೂಟರ್ ಹಾಗೂ ಸುಮಾರು 50,000/- ರೂ ಮೌಲ್ಯದ LED-T.Vಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 1,50,000/- ಆಗಿರುತ್ತದೆ.ಆರೋಪಿಯ ವಿರುದ್ಧ ಈ ಮೊದಲು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ಕಳ್ಳತನ ಪ್ರಕರಣಗಳು ,, ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ,ಕದ್ರಿ ಪೊಲೀಸ್ ಠಾಣೆಯಲ್ಲಿ 5 ಕಳ್ಳತನ ಪ್ರಕರಣಗಳು ,, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು , ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ಹಾಗೂ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles