ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ (ರಿ)ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲೆ ಪಂಚಾಯತ್, ದಕ್ಷಿಣ ಕನ್ನಡ ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ಸುಳ್ಯ ತಾಲೂಕು ಪಂಚಾಯತ್, ಹರಿಹರ ಗ್ರಾಮ ಪಂಚಾಯತ್, ಕೊಲ್ಲ ಮೊಗರು ಗ್ರಾಮ ಪಂಚಾಯತ್,ವಿಜಯ ಗ್ರಾಮೀಣಾ ಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ. ಪತ್ರಕರ್ತರ 5 ನೆ ಗ್ರಾಮ ವಾಸ್ತವ್ಯ ಕಾರ್ಯ ಕ್ರಮ ಫೆ.10ರಂದು ಬೆಳಗ್ಗೆ9ರಿಂದ ಕೊಲ್ಲಮೊಗರು ಬಂಗ್ಲೆಗುಡ್ಡೆ ಸರಕಾರಿ ಶಾಲೆ ಯಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ .
ಕಾರ್ಯಕ್ರಮದ ಉದ್ಘಾಟನೆಯನ್ನು ಯು ಟಿ ಖಾದರ್, ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆಯನ್ನು ಆರೋಗ್ಯ ಸಚಿವರು, ಹಾಗೂದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ.
ರೈತ ಸಂತೆ, ಗ್ರಾಮ ವಾಸ್ತವ್ಯದ ಮಾಹಿತಿ ಪುಸ್ತಕ ಬಿಡುಗಡೆ , ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ, ಹಸಿರು ಉಸಿರು ಕಾರ್ಯಕ್ರಮ, ಸ್ವಸಹಾಯ ಗುಂಪುಗಳ ಉತ್ಪಾದನೆಗಳ ಮಾರಾಟ ಮಳಿಗೆಗಳು, ವಿವಿಧ ಸರಕಾರಿ ಇಲಾಖೆಗಳ ಮಾಹಿತಿ , ಜನಪ್ರತಿನಿಧಿಗಳು ಹಾಗೂ ಅಧಿಕಾರಗಳೊಂದಿಗೆ ನೇರ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ರೈತರಿಗೆ ಅಡಿಕೆ ಬೆಳೆಗೆ ಹಳದಿ ರೋಗ ಹಾಗೂ ಎಲ್ಲೆ ಚುಕ್ಕಿ ರೋಗದ ಬಗೆ ತಜ್ಞರಿಂದ ಮಹಿತಿ ,ರೈತರಿಗೆ ಹೈನುಗಾರಿಕೆ ಹಾಗೂ ಜೇನು ಕೃಷಿ ಕುರಿತು ಮಾಹಿತಿ ಕಾರ್ಯಗಾರ,ಪ್ಲಾಸ್ಟಿಕ್ ತ್ಯಾಜ್ಯ ವಿರುದ್ಧ ಜಾಗೃತಿ ಅಭಿಯಾನ,ಗ್ರಾಮದ ವಿವಿಧ ಪ್ರದೇಶಗಳಿಗೆ ಪತ್ರಕರ್ತರ ಭೇಟಿ,ಗ್ರಾಮದ ಹಿರಿಯರ ಅನುಭವ ವಿನಿಮಯ ಚಾವಡಿ ಚರ್ಚೆ ರಾತ್ರಿ 8 ಗಂಟೆಯಿಂದ ಪತ್ರಕರ್ತರ ಗ್ರಾಮ ವಾಸ್ತವ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.