ಪಣಂಬೂರು : ಪಣಂಬೂರು ಪೋಲೀಸ್ ಠಾಣೆ ವತಿಯಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮತ್ತು ವಾಹನ ಸವಾರರು ಪಾಲಿಸಬೇಕಾದ ನಿಯಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಬೆಂಗರೆ ಕಸಬಾ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಪಣಂಬೂರು ಪೋಲಿಸ್ ನಿರೀಕ್ಷಕರಾದ ಮುಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಣಂಬೂರು ಪೊಲೀಸರು ಕಸಬಾ ಬೆಂಗ್ರೆಯಲ್ಲಿ ಜನ ಸಂಪರ್ಕ ಸಭೆ ನಡೆಸಿದರು. ಸಭೆಯಲ್ಲಿ ಪಣಂಬೂರು ಪಿಎಸ್ಐ ಜ್ಞಾನಶೇಖರ್, ಹೆಚ್ ಸಿ ನವೀನ್, ಲಕ್ಷ್ಮಣ್, ಅಂಬಣ್ಣ ಮತ್ತು ಸಿಬ್ಬಂದಿಗಳಾದ ವಿನಯ್,ಜಗದೀಶ್ವರ್,ಮಂಜುನಾಥ್ ,ಶರಣಬಸಪ್ಪ,ದೇವರಾಜ್, ಬೆಂಗರೆ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಬಿಲಾಲ್ ಮೊಯ್ದೀನ್, ಪ್ರ.ಕಾರ್ಯದರ್ಶಿ ಕಬೀರ್ , ಉಪಾಧ್ಯಕ್ಷರಾದ ಸಿ.ಪಿ ಮುಸ್ತಫ, ಬಿ.ಎಚ್ ಸಲೀಂ, ಮುಹಿಯುದ್ದೀನ್ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ಶರೀಫ್ ದಾರಿಮಿ, ಬದ್ರಿಯಾ ಮಸೀದಿಯ ಖತೀಬರಾದ ಅನ್ಸಾರ್ ಇರ್ಫಾನಿ, ಖಿಲ್ರಿಯಾ ಮಸೀದಿಯ ಖತೀಬರಾದ ನಾಸೀರ್ ಕೌಸರಿಯವರು ಉಪಸ್ಥಿತರಿದ್ದರು.
ಜನ ಸಂಪರ್ಕ ಸಭೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಊರಿನವರು ಪಾಲ್ಗೊಂಡಿದ್ದರು.