18.6 C
Karnataka
Saturday, November 23, 2024

“ಗಬ್ಬರ್ ಸಿಂಗ್” ತುಳು ಸಿನಿಮಾದ ಪ್ರೇಮಗೀತೆ, ಪೋಸ್ಟರ್ ಬಿಡುಗಡೆ

ಮಂಗಳೂರು: ಟೈಟಲ್, ಪೋಸ್ಟರ್ ನಿಂದಲೇ ಕುತೂಹಲ ಕೆರಳಿಸಿರೋ “ಗಬ್ಬರ್ ಸಿಂಗ್” ತುಳು ಚಲನಚಿತ್ರದ ಪ್ರೇಮಗೀತೆ ಮತ್ತು ಪೋಸ್ಟರ್ ನ್ನು ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಬಿಡುಗಡೆಗೊಳಿಸಿದರು. ದೇವದಾಸ್ ಕಾಪಿಕಾಡ್ ಅವರ ಮನೆಗೆ ತೆರಳಿದ ಗಬ್ಬರ್ ಸಿಂಗ್ ತಂಡ ಕಾಪಿಕಾಡ್ ಅವರಿಂದ ಪೋಸ್ಟರ್ ಮತ್ತು ಪ್ರೇಮಗೀತೆಯನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತಾಡಿದ ದೇವದಾಸ್ ಕಾಪಿಕಾಡ್ ಡೊಲ್ಪಿನ್ ಕೊಳಲಗಿರಿ ಅವರ ಸಂಗೀತದಲ್ಲಿ ಅರುಣ್ ಲೂಯಿಸ್ ಬರೆದಿರುವ ಸಾಹಿತ್ಯ ಅರ್ಥಪೂರ್ಣವಾಗಿದೆ. ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ನಿರ್ಮಾಪಕ ಸತೀಶ್ ಪೂಜಾರಿ ಅವರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಗಿರೀಶ್ ಶೆಟ್ಟಿ ಕಟೀಲು ಮೊದಲಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. ಪೋಸ್ಟರ್ ಬಿಡುಗಡೆಯ ಸಂದರ್ಭದಲ್ಲಿ ನಿರ್ಮಾಪಕ ಸತೀಶ್ ಪೂಜಾರಿ, ಮಧು ಸುರತ್ಕಲ್, ಉದಯ ಆಳ್ವ, ಅಥರ್ವ ಪ್ರಕಾಶ್, ನಾಯಕ ನಟ ಶರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಾಚ್೯ 22 ರಂದು ಕರಾವಳಿ ಜಿಲ್ಲೆಯಾದ್ಯಂತ ಗಬ್ಬರ್ ಸಿಂಗ್ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದರು.


ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಗಬ್ಬರ್ ಸಿಂಗ್ ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
“ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಸಿನಿಮಾ ಕತೆ ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರ್, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್ ಮೊದಲಾದವರಿದ್ದಾರೆ.
ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್.
ವಿಭಿನ್ನ ಕತೆ
ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾ ಮಾಚ್೯ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles