26.3 C
Karnataka
Saturday, November 23, 2024

ಶ್ರೀನಿವಾಸ ವಿಶ್ವವಿದ್ಯಾಲಯ: ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾ ಮೆರವಣಿಗೆ

ಮ೦ಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಎ. ಶಾಮ ರಾವ್ ಫೌಂಡೇಶನ್ ಮತ್ತು ಶ್ರೀನಿವಾಸ ಸಮೂಹ
ಸಂಸ್ಥೆಗಳ ಸಹಯೋಗದಲ್ಲಿ ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಪ್ರಶಾಂತ ಶ್ರೀನಿವಾಸ ಕ್ಯಾಂಪಸ್‌ನಲ್ಲಿರುವ ವೈಕುಂಠದಲ್ಲಿ ಭವ್ಯವಾದ ಆಧ್ಯಾತ್ಮಿಕ ಕೂಟ ನಡೆಯಿತು. ಕಾರ್ಯಕ್ರಮವು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಸಾಕ್ಷಿಯಾಯಿತು. ನವಗ್ರಹ ಶಾಂತಿ ಹೋಮ, ಚಕ್ರಾಬ್ಜ ಮಂಡಲಪೂಜೆ, ಲಕ್ಷ್ಮೀ ನಾರಾಯಣ ಹೋಮ, ವಾಯುಸ್ತುತಿ ಪುನಶ್ಚರಣ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ಆದಿವಾಸ ಹೋಮ, ಶಯ್ಯಾಧಿವಾಸ, ಕಲಶಮಂಡಲ ರಚನೆ, ಕಲಶ ಪೂಜೆ, ಅಘೋರ ಹೋಮ, ಲಕ್ಷ್ಮಿ ದುರ್ಗಾಪೂಜೆ, ಅಷ್ಟಾವಧಾನ, ಆಶ್ಲೇಷ ಬಲಿಸೇವೆ ಸೇರಿದಂತೆ ವೈದಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿತು.


ಸುಮಧುರ ಭಜನೆ, ಮನಮೋಹಕ ಸೀರೆ ಕುಣಿತ, ಯಕ್ಷಗಾನ – ಕೃಷ್ಣಾರ್ಜುನ ಕಾಳಗ ಪ್ರಸಂಗ ಪ್ರದರ್ಶನಗೊಂಡಿತು. ಸ೦ಜೆ 4 ಗಂಟೆಗೆ ಅಲಂಕಾರಗೊಂಡ ವಾಹನದಲ್ಲಿ ಶ್ರೀನಿವಾಸ ದೇವರ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕುಂಭ ಕಲಶ, ಚೆಂಡೆ ತಾಳ, ನವದುರ್ಗೆಯರು, ಇಸ್ಕಾನ್ ಅವರಿಂದ ಸಂಕೀರ್ತನೆ, ಕುಣಿತ ಭಜನೆ, ಬಂಟ್ವಾಳದ ಚಿಲಿಪಿಲಿ ಬೊಂಬೆ, ಡೊಳ್ಳು ಕುಣಿತ, ನಾಸಿಕ್
ಬ್ಯಾಂಡ್, ಪೂಜಾ ಕುಣಿತ ಗಮನ ಸೆಳೆಯಿತು. ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.


ಗೌರವಾನ್ವಿತ ಗಣ್ಯರ ಉಪಸ್ಥಿತಿಯು ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿತು. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ.ಸಿಎ. ಎ. ರಾಘವೇಂದ್ರ ರಾವ್, ಮತ್ತು ಸಹಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ಎ.ವಿಜಯಲಕ್ಷ್ಮಿ ಆರ್.ರಾವ್, ಪ್ರೊ. ಇಆರ್. ಮಿತ್ರಾ ಎಸ್. ರಾವ್, ಮತ್ತು ಪದ್ಮಿನಿ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles