17.5 C
Karnataka
Friday, November 22, 2024

ಶ್ರೀನಿವಾಸ ವಿಶ್ವವಿದ್ಯಾಲಯದ ವೈಕುಂಠದಲ್ಲಿ ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆ, ಶ್ರೀನಿವಾಸ ಕಲ್ಯಾಣ ಸಂಪನ್ನ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯವು ಎ.ಶಾಮರಾವ್ ಫೌಂಡೇಶನ್ ಮತ್ತು ಶ್ರೀನಿವಾಸ ಗ್ರೂಪ್ಆ ಫ್ ಕಾಲೇಜುಗಳ ಸಹಯೋಗದೊಂದಿಗೆ ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಕ್ಯಾಂಪಸ್ ವೈಕುಂಠದಲ್ಲಿ ಆಧ್ಯಾತ್ಮಿಕ ಆಚರಣೆ ಯಶಸ್ವಿಯಾಗಿ ನೆರವೇರಿತು.
ಬೆಳಗ್ಗೆ 4:30ಕ್ಕೆ ಭಕ್ತರು ಗಣಹೋಮದಲ್ಲಿ ಪಾಲ್ಗೊಂಡು, ನಂತರ ಪ್ರತಿಷ್ಠಾ ಪ್ರಸನ್ನ ಪೂಜೆಯೊಂದಿಗೆ ದಿನವು ಶ್ರದ್ಧಾಭಕ್ತಿಯಿಂದ ಪ್ರಾರಂಭವಾಯಿತು. ಕಲಶಾಭಿಷೇಕ, ವಿಷ್ಣು ಸಹಸ್ರನಾಮ ಹವನ, ಕಲ್ಪೋಕ್ತ ಪೂಜೆ, ಮತ್ತು ದಂಪತಿ ಪೂಜೆಯನ್ನು ಒಳಗೊಂಡ ಶುಭ ಕುಂಭ ಲಗ್ನದಲ್ಲಿ ಪ್ರತಿಷ್ಠಾ ಸಮಾರಂಭವು ಬೆಳಿಗ್ಗೆ 7:40 ಕ್ಕೆ ನಡೆಯಿತು.
ಶ್ರೀನಿವಾಸ ಕಲ್ಯಾಣೋತ್ಸವ:


ಶ್ರೀನಿವಾಸ ಕಲ್ಯಾಣೋತ್ಸವ ಸಾಯಂಕಾಲ 4:30 ಕ್ಕೆ ಉತ್ಸವದೊಂದಿಗೆ ಪ್ರಾರಂಭವಾಗಿ ಗೋಧೂಳಿ ಲಗ್ನದಲ್ಲಿ ನಡೆಯಿತು. ಶ್ರೀನಿವಾಸ ಕಲ್ಯಾಣದ ಶ್ರೀ ಮೂರ್ತಿಯನ್ನು ಶ್ರೀ ದೇವಿ ಭೂದೇವಿ ಸಹಿತವಾಗಿ ಉಡುಪಿಯ ಚಿಟ್ಪಾಡಿಯಿಂದ ತರಲಾಯಿತು. ಶ್ರೀನಿವಾಸ ಕಲ್ಯಾಣವನ್ನು ವಿದ್ವಾನ್ ಡಾ. ಬಿ. ಗೋಪಾಲ್ ಆಚಾರ್ಯ ನಿರೂಪಿಸಿದರು. ಹಾಡಿನಲ್ಲಿ ವಿದ್ವಾನ್ ನಾರಾಯಣ ಸರಳಾಯ, ಲಕ್ಷ್ಮೀ ಆಚಾರ್ಯ, ವಿದ್ಯಾ
ಕಾರಂತ, ಪಿಟೀಲಿನಲ್ಲಿ ಡಾ. ಶ್ರೀಧರ ಆಚಾರ್ಯ, ಮೃದಂಗದಲ್ಲಿ – ವಿದ್ವಾನ್ ಬಾಲಚಂದ್ರ ಬಾಗವತ್, ರಿದಮ್ ಪ್ಯಾಡ್ನಲ್ಲಿ ವಿದ್ವಾನ್ ಕಾರ್ತಿಕ್ ಭಟ್, ಸಂಪೂರ್ಣ ನಿರ್ವಹಣೆಯಲ್ಲಿ ರಾಘವೇಂದ್ರ ತಂತ್ರಿ ಕುಕ್ಕುಕಟ್ಟೆ ಸಹಕರಿಸಿದರು.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿಎ. ಎ.ರಾಘವೇಂದ್ರ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಮತ್ತುಎ. ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ್ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ಎ.ವಿಜಯಲಕ್ಷ್ಮಿ ಆರ್.ರಾವ್, ಪ್ರೊ. . ಇಆರ್.ಮಿತ್ರಾ ಎಸ್. ರಾವ್, ಮತ್ತು ಪದ್ಮಿನಿ ಕುಮಾರ್, ಶ್ರೀನಿವಾಸ ವಿಶ್ವವಿದ್ಯಾಲಯದ ಶೈಕ್ಷಣಿಕ ಕುಲಸಚಿವ ಡಾ.ಆದಿತ್ಯ ಮಯ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles