18.6 C
Karnataka
Saturday, November 23, 2024

“ಕೂಪ ಮಂಡೂಕ” ಕಿರುಚಿತ್ರಕ್ಕೆ 9 ವಿಭಾಗಗಳಲ್ಲಿ ಪ್ರಶಸ್ತಿ

ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ, ವಿಠಲ್ ಶೆಟ್ಟಿ ಫೌಂಡೇಶನ್ ಮತ್ತು ಫಿಜಾ ನೆಕ್ಸಸ್ ಮಾಲ್ ಸಹೋಯೋಗದಲ್ಲಿ ಅಸ್ತ್ರ ಗ್ರೂಪ್ ಮಿನಿ ಸಿನಿ ಅವಾರ್ಡ್ ಕಾರ್ಯಕ್ರಮದಲ್ಲಿ ಲಕುಮಿ ಕ್ರಿಯೇಷನ್ ಬ್ಯಾನರ್ ನಡಿಯಲ್ಲಿ, ಕಿಶೋರ್ ಡಿ ಶೆಟ್ಟಿ ನಿರ್ಮಾಣದ, ರಂಗಭೂಮಿ, ಚಲನಚಿತ್ರ ಯುವ ನಟ, ನಿರ್ದೇಶಕ ಚೇತನ್ ಜಿ ಪಿಲಾರ್ ನಿರ್ದೇಶನದ “ಕೂಪ ಮಂಡೂಕ” ಕಿರುಚಿತ್ರವು ಉತ್ತಮ ಕಿರುಚಿತ್ರ ಪ್ರಶಸ್ತಿಯೊಂದಿಗೆ ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅತ್ಯುತ್ತಮ ಛಾಯಾಗ್ರಹಣ – ಸಂತೋಷ್ ಆಚಾರ್ಯ ಗುಂಪಲಾಜೆ, ಅತ್ಯುತ್ತಮ ಕಲಾ ನಿರ್ಮಾಣ- ತುಲಸಿದಾಸ್ ಮಂಜೇಶ್ವರ, ಅತ್ಯುತ್ತಮ ನಟ – ತಿಮ್ಮಪ್ಪ ಕುಲಾಲ್, ಅತ್ಯುತ್ತಮ ಸಹ ನಟಿ – ಸುನಿತಾ ಎಕ್ಕೂರ್, ಉತ್ತಮ ಸಂಗೀತ – ಗುರು ಬಾಯಾರ್, ಅತ್ಯುತ್ತಮ ಕಥೆ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಿರ್ದೇಶನಕ್ಕಾಗಿ ಚೇತನ್ ಜಿ ಪಿಲಾರ್ ವೈಯಕ್ತಿಕವಾಗಿ ಮೂರು ಪ್ರಶಸ್ತಿಗಳ ಜೊತೆಗೆ ತಮ್ಮ ಚೊಚ್ಚಲ ಪ್ರಯತ್ನಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡು ಚಿತ್ರರಂಗದಲ್ಲಿ ತಮ್ಮ ಭವಿಷ್ಯವನ್ನ ಭದ್ರಗೊಳಿಸುವ ಭರವಸೆಯನ್ನ ಮೂಡಿಸಿದ್ದಾರೆ.
ಓರ್ವ ರಂಗಭೂಮಿ ನಟ- ನಿರ್ದೇಶಕನಾಗಿ, ಚಲನಚಿತ್ರ ಕಲಾವಿದನಾಗಿ, ನಟನಾ ತರಬೇತುದಾರನಾಗಿ ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ತುಳು ಚಿತ್ರ ” ನಮ್ಮ ಕುಡ್ಲ “, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಿಷಬ್ ಶೆಟ್ಟಿ ನಿರ್ದೇಶನದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು” , ರಾಜ್ ಬಿ ಶೆಟ್ಟಿ ನಿರ್ದೇಶನದ “ಟೋಬಿ” ಇವರು ಅಭಿನಯಿಸಿದ ಪ್ರಮುಖ ಚಿತ್ರಗಳು, ಜೊತೆಗೆ ನಮ್ಮ ಟಿವಿ “ಉಂದು ನಾಟಕ ” ಸೀಸನ್ 3 ವಿಜೇತರು ಕೂಡಾ.
ಸದ್ಯ ಚೇತನ್ ರವರು ಕಿಶೋರ್ ಡಿ ಶೆಟ್ಟಿ ಸಾರಥ್ಯದ ಲಕುಮಿ ನಾಟಕ ತಂಡದ ಪ್ರಮುಖ ಕಲಾವಿದನಾಗಿ ತಮ್ಮ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles