17.5 C
Karnataka
Saturday, November 23, 2024

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲ್ಯಾಬ್ ಗಳ ಉದ್ಘಾಟನೆ

ಮಂಗಳೂರು: ವಿಕಸಿತವಾಗುತ್ತಿರುವ ಭಾರತದಲ್ಲಿ ಕೈಗಾರಿಕೆ ಸೇರಿದಂತೆ ಖಾಸಗಿ ಉತ್ಪಾದನಾ ರಂಗದಲ್ಲಿ ಸಿವಿಲ್, ಮೂಲ ಸೌಕರ್ಯಗಳು ಸೇರಿದಂತೆ ಭರ್ಜರಿ ಅವಕಾಶಗಳು ಸೃಷ್ಟಿಯಾಗುತ್ತಿವೆ. ಜಾಗತಿಕ ಉದ್ಯೋಗಾವಕಾಶಗಳಿಗೆ ಹಾತೊರೆಯುತ್ತಿದ್ದ ಸ್ಥಿತಿ ಬದಲಾಗಿ ವಿದೇಶಿ ಉದ್ಯಮಗಳೂ ಭಾರತದಲ್ಲಿ ಅವಕಾಶಗಳಿಗಾಗಿ ಹಾತೊರೆಯುತ್ತಿದ್ಧಾರೆ. ವೃತ್ತಿರಂಗದಲ್ಲಿ ಜ್ಞಾನದ ಹಸಿವಿನೊಂದಿಗೆ ನಿರಂತರ ಕಲಿಕೆ, ಬದಲಾವಣೆಗೆ ಸ್ಪಂದಿಸಿ ಅಸ್ತಿತ್ವ ಉಳಿಸಿಕೊಳ್ಳುವ ಜಾಣ್ಮೆ, ವಿಶ್ವಾಸಾರ್ಹತೆಯ ಜತೆಗೆ ವೈಯಕ್ತಿಕ ಬದುಕು, ಕುಟುಂಬ,ಸಮಾಜದ ಜತೆಗೂ ಸಮತೋಲನ ಕಾಯ್ದುಕೊಂಡಾಗ ಬದುಕು ಯಶಸ್ಸು ಮತ್ತು ಸಾಧನೆಯಿಂದ ಕೂಡಿರಲು ಸಾಧ್ಯ ಎಂದು ಟಾಟಾ ಪ್ರಾಜೆಕ್ಟ್ ಲಿ. ಇದರ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ಪೈ ಹೇಳಿದರು.
ಅವರು ಶನಿವಾರ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅತ್ಯಾಧುನಿಕ ಲ್ಯಾಬ್ ಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಧಾವಿಸುತ್ತಿದ್ದು ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಏಷ್ಯಾ ಎಟ್ ವರ್ಲಿ ಅಧ್ಯಕ್ಷ ದಿನೇಶ್ ಪಿಸುರ್ಲೇಂಕರ್ ಮಾತನಾಡಿ ಭಾರತೀಯ ಯುವ ಸಂಪನ್ಮೂಲಕ್ಕೆ ಜಾಗತಿಕ ಬೇಡಿಕೆ ಸೃಷ್ಟಿಯಾಗುತ್ತಿದೆ. ಜೀವನದಲ್ಲಿ ಶಿಸ್ತು, ಉತ್ತಮ ಮನೊಭಾವ,ಚುರುಕುತನದ ಜತೆಗೆ ಕಠಿಣ ಪರಿಶ್ರಮವಿದ್ದಾಗ ಜೀವನವನ್ನು ಆನಂದಿಸಲು ಸಾಧ್ಯ ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ವಾಸುದೇವ ಕಾಮತ್, ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಶ್ ಹೆಚ್. ಆರ್. ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಕೌನ್ಸಿಲ್ ಸಂಚಾಲಕ ಪ್ರದೀಪ್ ಜಿ. ಪೈ ಸ್ವಾಗತಿಸಿ ಆಡಳಿತ ಮಂಡಳಿಯ ಸಹ ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್ ವಂದಿಸಿದರು.ಸಹಪ್ರಾಧ್ಯಾಪಕಿ ಕ್ಯಾರಲ್ ಡಿ. ಮೆಲ್ಲೋ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles