ಮ೦ಗಳೂರು: ಕದ್ರಿ ಪದವು ಶ್ರೀ ಭದ್ರಕಾಳಿ ದೇವಸ್ಥಾನದ ಶ್ರೀ ಭದ್ರಕಾಳಿ ಅಮ್ಮನ ಗುಡಿಯ ಪುನ: ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿ ತಿಂಗಳ 28 ರಿ೦ದ ಆರಂಭಗೊ೦ಡು ಮಾ.1ರವರೆಗೆ ಕದ್ರಿ ಯೋಗೀಶ್ವರ ಮಠಾಧಿಪತಿ ಶ್ರೀ ರಾಜ ನಿರ್ಮಲ್ ನಾಥ್ ಜಿ ಅವರ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್ ಜಿ .ಅವರ ನಿರ್ದೇಶನದಂತೆ ಬ್ರಹ್ಮಶ್ರೀ ದೇರೆಬೈಲ್ ವಿಠಲ ದಾಸ್ ತಂತ್ರಿ ಅವರ ಧಾರ್ಮಿಕ ವಿಧಿ ವಿಧಾನಗಳ ನಿಯಮಾನುಸಾರ ನೆರವೇರಲಿದೆ.
ಕರಾವಳಿ ಜಿಲ್ಲೆಯಲ್ಲಿರುವ ಪುರಾತನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀಭದ್ರಕಾಳಿ ದೇವಸ್ಥಾನ ನಾಥ ಸಂಪ್ರದಾಯದ ಕದ್ರಿ ಯೋಗೀಶ್ವರ ಮಠಾಧಿಪತಿಗಳಿಂದ ಪೂಜೆಗೊಳಪಟ್ಟು ಪರಂಪರೆಯ ಪ್ರಭಾವವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇಲ್ಲಿನ ವಿಶೇಷತೆ ಎ೦ದು ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್ ಜಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರದಹಳ್ಳಿಯ ಪ್ರಖ್ಯಾತ ಶ್ರೀ ಶ್ರೀಧರ ಸ್ವಾಮೀಜಿಗಳು ದಟ್ಟ ಕಾಡಿನಿಂದ ಆವೃತವಾಗಿರುವ ಈ ಭಾಗದಲ್ಲಿ ತಮ್ಮ ಭಕ್ತರೊಂದಿಗೆ ಸಂಚಾರ ಮಾಡುತ್ತಿದ್ದಾಗ ಇಲ್ಲೊಂದು ಅಗೋಚರ ಶಕ್ತಿಯಾ ನಿಂತಿರುವ ಬಗ್ಗೆ ತನ್ನ ತಪೋಶಕ್ತಿಯಿಂದ ಅರಿತುಕೊಳ್ಳುತ್ತಾರೆ. ಮುಂದೆ ಇದೇ ಸ್ಥಳದಲ್ಲಿ ತನ್ನ ವೃಂದದೊಂದಿಗೆ ಚಾತುರ್ಮಾಸ ವ್ರತ ಕೈಗೊಂಡ ಸಂದರ್ಭದಲ್ಲಿ ತಾಯಿ ಭದ್ರಕಾಳಿಯು ಕನಸ್ಸಿನಲ್ಲಿ ಬಂದು ಗುಡಿ ನಿರ್ಮಿಸಲು ಆಜ್ಞಾಪಿಸಿದಾಗ ಈ ಸ್ಥಳದಲ್ಲಿ ಗುಡಿ ನಿರ್ಮಿಸಿ ಮಂಗಳವಾರ ಶುಕ್ರವಾರದಂದು ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ನೆರವೇರುವಂತೆ ಮಾಡಿದರೆಂಬ ಐತಿಹ್ಯ ಇದೆ. ಮುಂದಕ್ಕೆ 1967 ನೇ ಇಸವಿಯಲ್ಲಿ ಕದ್ರಿ ಯೋಗೀಶ್ವರ ಮಠಾಧಿಪತಿಗಳಾಗಿದ್ದ ಶ್ರೀ ಶಾಂತಿನಾಥ್ ಜಿ ಅವರ ಕಾಲಾವಧಿಯಲ್ಲಿ ಸುಂದರವಾದ ಗುಡಿಯ ನಿರ್ಮಾಣಕ್ಕೆ ಮುನ್ನುಡಿಯಾಯಿತು ಎ೦ದರು.
ಇದೀಗ ಸುಮಾರು ಐವತ್ತೇಳು ವರ್ಷಗಳ ನಂತರ ಪ್ರಸ್ತುತ ಈ ದೇವಳದ ಪ್ರಧಾನ ಅರ್ಚಕರಾಗಿರುವ ಉಮೇಶ್ ನಾಥ್ ಜಿ ಅವರ ಕನಸಿನಂತೆ ಸರಿ ಸುಮಾರು 2.5 ಕೋ.ರೂಪಾಯಿಗೂ ಮಿಕ್ಕಿದ ವೆಚ್ಚದಲ್ಲಿ ಭಕ್ತರು ಹಾಗೂ ದಾನಿಗಳು ನೀಡಿದ ನೆರವಿನಲ್ಲಿ ಶಿರಾ ಶಿಲೆ ತಾಮ್ರ ಹಾಗೂ ಮರಗಳನ್ನು ಬಳಸಿ ಪುನ:ನಿರ್ಮಾಣ ಕಾರ್ಯ ನಡೆದಿದೆ.ಕುಡುಪು ಕೃಷ್ಣರಾಜ ತಂತ್ರಿಯವರ ಅತ್ಯಂತ ಮನಮೋಹಕ ವಾಸ್ತು ವಿನ್ಯಾಸದಂತೆ ಗುಡಿಯ ವಿನ್ಯಾಸ ಕಾಯ೯ಪೂರ್ತಿಗೊಂಡಿ
ದೆ.
ಪತ್ರಿಕಾ ಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಸಂಚಾಲಕ ಡಾ! ರಾಜೇಶ್ ಕದ್ರಿ,ಧಾರ್ಮಿಕ ಕಾರ್ಯಕ್ರಮದ ಸಂಘಟಕ ರಿತೀಶ ದಾಸ್ ಕೊಪ್ಪಲ್ ಕಾಡು, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಮೋಹನ್ ಕೊಪ್ಪಲ ಉಪಸ್ಥಿತರಿದ್ದವರು