ಮ೦ಗಳೂರು: ನಳಿನ್ ಕುಮಾರ್ ಕಟೀಲ್ ಸ೦ಸದರಾಗಿ ದ.ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸುಮಾರು ಒ೦ದು ಲಕ್ಷ ಕೋ.ರೂ.ವಿವಿಧ ಅಭಿವೃದ್ಧಿ ಅನುದಾನಗಳು ಬಿಡುಗಡೆ ಆಗಿದೆ.
ನಳಿನ್ ಕುಮಾರ್ ಕಟೀಲ್ ಸ೦ಸದರಾಗಿ 3 ನೇ ಬಾರಿ ಆಯ್ಕೆಯಾದ ಅವಧಿಯಲ್ಲಿ ಅನುದಾನಗಳು ಬಿಡುಗಡೆ,ಕ್ಷೇತ್ರ ಅಭಿವೃದ್ಧಿ ಮತ್ತು ರಾಜ್ಯಾಧ್ಯಕ್ಷರಾಗಿ ಮಾಡಿದ ಸಾಧನೆಗಳ ಪಕ್ಷಿನೋಟದ ಕಿರುಹೊತ್ತಗೆಯನ್ನು ಗುರುವಾರ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕು೦ಪಲ, ಮಾಜಿ ಅಧ್ಯಕ್ಷ ಸುದಶ೯ನ್ ಮೂಡುಬಿದಿರೆ, ಪ್ರಧಾನ ಕಾಯದಶಿ೯ಗಳಾದ ಪ್ರೇಮಾನ೦ದ ಶೆಟ್ಟಿ,ಕಿಶೋರ್ ಪುತ್ತೂರು ಉಪಸ್ಥಿತರಿದ್ದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಆಡ್ಡಹೊಳೆ ಯಿಂದ ಬಂಟ್ವಾಳದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ,
ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಬಿಕರ್ನಕಟ್ಟೆ ಯಿಂದ ಕಾರ್ಕಳ ಸಾಣೂರು ವರೆಗೆ ಚತುಷ್ಪಥ ರಸ್ತೆ ನಿರ್ಮಾಣ,.ಪಿ.ಟಿ. ಬಳಿ ವೆಹಿಕಲ್ ಒವರ್ ಪಾಸ್ ಸೇತುವೆ ನಿರ್ಮಾಣ 34.61
ಕೂಳೂರು ಬಳಿ ಷಟ್ಪಥ ಸೇತುವೆ ನಿರ್ಮಾಣ ಕಾಮಗಾರಿ ,ನಂತೂರು ಬಳಿ ವೆಹಿಕಲ್ ಓವರ್ ಪಾಸ್ ಸೇತುವೆ ನಿರ್ಮಾಣ,ಶಿರಾಡಿ ಘಾಟ್ ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಸೇರಿದ೦ತೆ4711.13 ಕೋಟಿರೂ .ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.ಮಂಗಳೂರು ಬೈಪಾಸ್ ರಸ್ತೆ,ರಾಷ್ಟೀಯ ಹೆದ್ದಾರಿ 75 ರಲ್ಲಿ ಶಿರಾಡಿ ಘಾಟ್ ನಲ್ಲಿ ಸುರಂಗ ಮಾಗ೯ ಸೇರಿದ೦ತೆ 6469.04 ಕೋಟಿರೂ .ವೆಚ್ಚದ ಕಾಮಗಾರಿಗಳು ಮುಂದಿನ ಹಂತದಲ್ಲಿ ಅನುಮೋದನೆಗೊಳ್ಳಲಿರುವ ಯೋಜನೆಗಳು.ರಾಷ್ಟ್ರೀಯ ಹೆದ್ದಾರಿ ಮಂಗಳೂರು ಸಬ್ ಡಿವಿಜನ್ ನಲ್ಲಿ 683.89 ಕೋಟಿರೂ .ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ.
NH 73 ಪುಂಜಾಲಕಟ್ಟೆಯಿಂದ ಚಾರ್ಮಡಿ ವರೆಗೆ 718.52 ಕೋಟಿರೂ .ವೆಚ್ಚದ ದ್ವಿಪಥ ರಸ್ತೆ ಅಗಲಿಕರಣ ಕಾಮಗಾರಿ ಪ್ರಗತಿಯಲ್ಲಿದೆ.1958ಕೋಟಿ ರೂ .ವೆಚ್ಚದ ಕಾಮಗಾರಿಗಳು ಮುಂದಿನ ಹಂತದಲ್ಲಿ ಅನುಮೋದನೆಗೊಳ್ಳಲಿರುವ ಯೋಜನೆಗಳು.
ನವಮಂಗಳೂರು ಬಂದರು ಹಾಗೂ ಸಾಗರಮಾಲ ಯೋಜನೆಗಳಲ್ಲಿ 2107.22 ಕೋಟಿರೂ .ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ 800ಕೋಟಿ ರೂ .ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದೆ. ಸಾಗರಮಾಲ ಯೋಜನೆಗಳಲ್ಲಿ 175.17ಕೋಟಿ ರೂ .ವೆಚ್ಚದ ಕಾಮಗಾರಿಗಳು ಮಂಜೂರಾಗಿವೆ.
416.98 ಮಂಜೂರಾಗಿರುವ ರೈಲ್ವೆ ಕಾಮಗಾರಿಗಳು ಮ೦ಜೂರಾಗಿವೆ. 1537.65 ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದೆ.685.21ಕೋಟಿರೂ .ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ.ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 450.91 ಕೋಟಿರೂ .ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ .5650.91 ಕೋಟಿರೂ .ವೆಚ್ಚದ ಕಾಮಗಾರಿಗಳು ಅನುಮೋದನೆಗೊಳ್ಳಲಿರುವ ಕಾಮಗಾರಿಗಳು.
ಮಂಗಳೂರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭ. ಪುತ್ತೂರಿನಲ್ಲಿ ರಬ್ಬರ್ ಬೋರ್ಡನ ಪ್ರಾದೇಶಿಕ ಕಛೇರಿ ಆರಂಭ,ಪ್ರತಿ ವರ್ಷ “ಬ್ಯಾಂಕಿಂಗ್ ಔಟ್ ರೀಚ್” ಕಾರ್ಯಕ್ರಮವನ್ನು ಆಯೋಜಿಸುವ ಮೂಲಕಬ್ಯಾಂಕರ್ಸ್ ಹಾಗೂ ಫಲಾನುಭವಿಗಳನ್ನು ಒಂದೇ ಸೂರಿನಲ್ಲಿ ಸೇರಿಸಿ ಸರ್ಕಾರದ ವಿವಿಧ ಯೋಜನೆಗಳಿಗೆ ಬ್ಯಾಂಕಿಂಗ್ ಸಾಲ ಸೌಲಭ್ಯಗಳು ಏಕ ಗವಾಕ್ಷಿಯಲ್ಲಿ ದೊರೆಯುವಂತೆ ಮಾಡಿ
ಉತ್ತಮ ಯಶಸ್ಸು ಪಡೆದಿರುವುದು.,ನವಮಂಗಳೂರು ಬಂದರು ಟ್ರಸ್ಟ್ ಗೆ ಹೆಚ್ಚಿನ ಸ್ವಯತ್ತತೆ ನೀಡಲು ನವಮಂಗಳೂರು ಬಂದರು ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಲಾಗಿದೆ.
ರಾಜ್ಯಾಧ್ಯಕ್ಷರಾಗಿ ಮಾಡಿದ ಸಾಧನೆಗಳು: 25 ಬಾರಿ ರಾಜ್ಯ ಪ್ರವಾಸ,2 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ನಾಮ ನಿರ್ದೇಶನಗಳಿಗೆ ಪಕ್ಷದ ಅರ್ಹ ಕಾರ್ಯಕರ್ತರುಗಳನ್ನು ಗುರುತಿಸಿ ಶಿಫಾರಸು ಮಾಡಿ, ತಳಮಟ್ಟದವರಿಗೂ ಅವಕಾಶವನ್ನು ನೀಡಿರುವುದು.ಸಂಘಟನಾತ್ಮಕ ರಚನೆಯ ಅಧ್ಯಯನ ಪ್ರವಾಸ ಹಾಗೂ ಸದಸ್ಯತಾ ಅಭಿಯಾನದ ಬಗ್ಗೆ ವಿಶೇಷ ಗಮನ, ನೂತನ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯದ 312 ಮಂಡಲಗಳ ನೂತನ ಅಧ್ಯಕ್ಷರ ಪದಗ್ರಹಣ, ನೂತನ ಮಂಡಲ ಅಧ್ಯಕ್ಷರ ಸಮ್ಮುಖದಲ್ಲಿ ವಾರ್ಡ್ ಮತ್ತು ಬೂತ್ ಅಧ್ಯಕ್ಷರುಗಳ ಪದಗ್ರಹಣದಂತಹ ಅದ್ಭುತ ಸಂಘಟನಾತ್ಮಕ ಪರಿಯೋಜನೆ. ,ಜನಸೇವಕ್ ಸಮಾವೇಶ., ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷವು ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಆಹಾರ ಧಾನ್ಯದ ಕಿಟ್‌ಗಳು, 2 ಕೋಟಿ ಆಹಾರ ಪ್ಯಾಕೆಟ್‌ಗಳು, ಅಗತ್ಯವಿರುವ ಔಷಧವನ್ನು 1.5 ಲಕ್ಷಕ್ಕೂ ಹೆಚ್ಚು ಅಗತ್ಯ ಜನರಿಗೆ ವಿತರಿಸಿದೆ ಹೆಚ್ಚು ಮಾಸ್ಟ್‌ಗಳನ್ನು ವಿತರಿಸಲಾಗಿದೆ. ಕಷ್ಟದ ಸಮಯದಲ್ಲಿ ಜನತೆಗೆ ಸ್ಪಂದಿಸಿದ ರಾಜ್ಯದ 75000ಕ್ಕೂ ಹೆಚ್ಚು ಕರೋನಾ ಯೋಧರ ಸಂಮಾನ. ರಾಜ್ಯ ಮಟ್ಟದ ಪ್ರಕೋಷ್ಟ್ರಗಳ ಸಮಾವೇಶ . ಜನೋತ್ಸವ ಸಮಾವೇಶಗಳ ಮತ್ತು ಮೋರ್ಚಗಳ ರಾಜ್ಯ ಮಟ್ಟದ ಸಮಾವೇಶಗಳು, ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜನೋತ್ಸವ ಸಮಾವೇಶಗಳು ಮತ್ತು ಮೋರ್ಚಾಗಳ ರಾಜ್ಯಮಟ್ಟದ ಸಮಾವೇಶ ,ಜನ ಸಂಕಲ್ಪ ಅಭಿಯಾನದಲ್ಲಿ 50 ವಿಧಾನಸಭೆ ಕ್ಷೇತ್ರಗಳ ಪ್ರವಾಸ-ರಾಜ್ಯಾದ್ಯಂತ 4 ತಂಡಗಳಲ್ಲಿ ನಡೆದ ತಲಾ 50 ವಿಧಾನಸಭಾ ಕ್ಷೇತ್ರಗಳ ಜನಸಂಕಲ್ಪ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ 50 ವಿ.ಸ.ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.
