ಮಂಗಳೂರು: ಸುಪ್ರಸಿದ್ಧ ಧಾರ್ಮಿಕ ಸ್ಥಳ, ಮಂಗಳೂರು ದಸರಾದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಬಳಿ ಪಾಲಿಕೆಯ 2022-23 ನೇ ಸಾಲಿನ 15ನೇ ಹಣಕಾಸಿನಿಂದ ಸುಮಾರು 48 ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಲಾದ ಅಲಂಕಾರಿಕ ಬೀದಿ ದೀಪದ ಕಂಬಗಳನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈಗಾಗಲೇ ಇಂತಹ ಅಲಂಕಾರಿಕ ಬೀದಿದೀಪ ಕಂಬಗಳನ್ನು ಮಂಗಳಾದೇವಿ, ಕಾರ್ ಸ್ಟ್ರೀಟ್ ವೆಂಕಟ್ರಮಣ ದೇವಸ್ಥಾನ, ಡೊಂಗರಕೇರಿ ವೆಂಕಟ್ರಮಣ ದೇವಸ್ಥಾನಗಳ ರಸ್ತೆಗಳಲ್ಲಿ ಕಾಣಬಹುದಾಗಿದೆ. ಮಂಗಳೂರು ದಸರಾ ಸಂದರ್ಭದಲ್ಲಿ ಮಾತ್ರವಲ್ಲದೇ ವರ್ಷವಿಡೀ ಈ ದೇವಸ್ಥಾನಕ್ಕೆ ದೇಶ ವಿದೇಶಗಳ ಸಾವಿರಾರು ಭಕ್ತಾಧಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಈ ಪ್ರದೇಶವು ಸದಾ ಆಕರ್ಷಣೀಯವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯೆ ಜಯಶ್ರೀ ಜೆ.ಕುಡ್ವ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸಾಯಿ ರಾಮ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಮಾಧವ ಸುವರ್ಣ, ಶೇಖರ್ ಪೂಜಾರಿ, ಊರ್ಮಿಳಾ ರಮೇಶ್ ಕುಮಾರ್, ಮಾಜಿ ಮನಪ ಸದಸ್ಯರಾದ ರಾಜೇಂದ್ರ ಕುಮಾರ್, ರಾಧಾಕೃಷ್ಣ, ಪಕ್ಷದ ಹಿರಿಯರಾದ ದಿನ್ಕರ್ ಶೆಟ್ಟಿ, ರಮೇಶ್ ಪಟಾಲ್, ನರಹರಿ ಪ್ರಭು, ಜನಾರ್ಧನ ಕುಡ್ವ, ಪುಷ್ಪ ಶೆಟ್ಟಿ, ತ್ರಿವಿಕ್ರಂ ಪ್ರಭು, ಪ್ರವೀಣ್ ಕುದ್ರೋಳಿ, ಗೋಪಾಲ್ ಶೇಟ್, ಶರತ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಸುನಿಲ್, ದೇವಾನಂದ ಶೆಣೈ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.