26.5 C
Karnataka
Saturday, November 23, 2024

65 ವರ್ಷಗಳ ನಂತರ ಕೊಂಗೂರಿಗೆ ರಸ್ತೆ : ಸ್ಥಳೀಯರ ಸಂಭ್ರಮ

ಮ೦ಗಳೂರು: ಪದವು ಸೆಂಟ್ರಲ್ ವಾರ್ಡಿನ ಹಲವು ದಶಕಗಳ ಪ್ರಮುಖ ಬೇಡಿಕೆಯಾಗಿದ್ದ ಕೊಂಗೂರಿನಿಂದ ಶಕ್ತಿನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು 58 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.

ಶಾಸಕರು ಮಾತನಾಡಿ ಕಳೆದ 65 ವರ್ಷಗಳಿಂದ ಇಲ್ಲಿನ ಸ್ಥಳೀಯರು ರಸ್ತೆಯಿಲ್ಲದೇ ಅನುಭವಿಸುತ್ತಿದ್ದ ತೊಂದರೆ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿಯವರು ನಮ್ಮ ಗಮನಕ್ಕೆ ತಂದಿದ್ದರು. ಆದರೆ ಮುಖ್ಯವಾಗಿ ಈ ಪ್ರದೇಶವು ರೈಲ್ವೆ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ರಸ್ತೆ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ನಂತರ, ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ನಿರಂತರವಾಗಿ ರೈಲ್ವೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಅನೇಕ ಸುತ್ತಿನ ಸಭೆ ನಡೆಸಿ, ಸತತ ಪ್ರಯತ್ನದ ನಂತರ ಇಲ್ಲಿ ರಸ್ತೆ ನಿರ್ಮಿಸಲಾಗಿದ್ದು ಕೊಂಗೂರು ನಿವಾಸಿಗಳು ಮಣ್ಣಿನ ರಸ್ತೆಯಿಂದ ಅನುಭವಿಸುತ್ತಿದ್ದ ಭವಣೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ ಎಂದು ಹೇಳಿದರು.

ಕಳೆದ 65 ವರ್ಷಗಳಿಂದ ಇಲ್ಲಿಗೆ ಸಮರ್ಪಕ ರಸ್ತೆಯಿಲ್ಲದೇ ಸ್ಥಳೀಯ ನಿವಾಸಿಗಳಾದ ನಾವು ಅನುಭವಿಸುತ್ತಿದ್ದ ಸಂಕಷ್ಟ ಅದರಲ್ಲೂ ಮಳೆಗಾಲದಲ್ಲಂತೂ ಹೇಳತೀರದಾಗಿತ್ತು. ಅನೇಕ ಮನವಿಗಳ ನಂತರವೂ ರಸ್ತೆ ನಿರ್ಮಾಣ ಸಾಧ್ಯವಾಗದ ಕಾರಣ ಆಸಕ್ತಿಯನ್ನೇ ಕಳೆದುಕೊಂಡಿದ್ದೆವು. ಕೊನೆಗೂ ಶಾಸಕ ವೇದವ್ಯಾಸ್ ಕಾಮತ್ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ರಸ್ತೆ ನಿರ್ಮಾಣವಾಗಿದ್ದು, ವಿಶೇಷ ಮುತುವರ್ಜಿ ವಹಿಸಿದ ಸ್ಥಳೀಯ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ನಾವು ಸದಾ ಚಿರಋಣಿ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮ.ನ.ಪಾ ಸದಸ್ಯರಾದ ಪೂರ್ಣಿಮಾ, ಮನೋಹರ್ ಶೆಟ್ಟಿ ಕದ್ರಿ, ಲೋಕೇಶ್ ಬೊಳ್ಳಾಜೆ, ತೇಜಸ್ ಕೊಂಗೂರು, ಗಣೇಶ್ ಹೆಬ್ಬಾರ್, ಗೋಪಾಲ್ ಕೊಂಗೂರು, ಮಯೂರ್ ಉಳ್ಳಾಲ್, ಅಶೋಕ್ ಕೊಂಗೂರು, ಆಲ್ವಿನ್, ಸುಬ್ರಹ್ಮಣ್ಯ ಭಟ್, ಪುರುಷೋತ್ತಮ, ಅನಂತ್ ಭಟ್, ಡಾ. ಸತ್ಯನಾರಾಯಣ ಕೊಂಗೂರು, ನವೀನ್ ಡಿಸೋಜಾ, ಎಲ್ವಿಟಾ ಟೀಚರ್, ಪಾರ್ವತಿ ಕೊಂಗೂರು, ಶ್ರೀಲತಾ, ರಾಜ್ ಪಾಲ್, ಸುರೇಶ್ ಕೋಟ್ಯಾನ್, ರವಿಪ್ರಕಾಶ್, ಕೃಷ್ಣ ಕೊಂಗೂರು, ಹರೀಶ್ ಕೊಂಗೂರು, ರವಿಚಂದ್ರ, ಅರುಣಚಂದ್ರ, ಮಹೇಶ್ ಬಂಗೇರ, ಸುಜಿತ್ ಕುಮಾರ್, ವಿನಯ್ ಕುಮಾರ್, ಸುಮನಾ ಶರಣ್, ಮಾಧವ ಭಟ್, ಚೇತನ್ ಶೆಣೈ, ಮುಂತಾದ ಪ್ರಮುಖರು ಹಾಗೂ ಅನೇಕ ಸ್ಥಳೀಯರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles