ಮಂಗಳೂರು: ಅಯೋಧ್ಯೆಯಲ್ಲಿ 48 ದಿನಗಳ ಮಂಡಲೋತ್ಸವವನ್ನು ಪೂರ್ಣಗೊಳಿಸಿ ಮರಳಿದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜನವರಿ 30 ರಿಂದ ಮಾರ್ಚ್ 11ವರೆಗೆ ಶ್ರದ್ಧಾಭಕ್ತಿಯಿಂದ ಮಂಡಲ ಪೂಜೆ ನೆರವೇರಿದೆ. ಇದೀಗ ಆ ಪವಿತ್ರ ಕ್ಷೇತ್ರದಿಂದ ಪುಣ್ಯಭೂಮಿ ತುಳುನಾಡಿಗೆ ಆಗಮಿಸಿರುವ ಶ್ರೇಷ್ಠ ಸಂತರನ್ನು ಸ್ವಾಗತಿಸುವ ಸೌಭಾಗ್ಯ ನಮ್ಮೆಲ್ಲರದ್ದು ಎಂದರು.
ಈ ಸಂದರ್ಭದಲ್ಲಿ ವಿಹಿಂಪನ ಪ್ರೊ. ಎಂ.ಬಿ ಪುರಾಣಿಕ್, ಸುಧಾಕರ ಪೇಜಾವರ , ಮ.ನ.ಪಾ ಸದಸ್ಯರಾದ ಪೂರ್ಣಿಮಾ, ಮನೋಹರ್ ಕದ್ರಿ, ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ವಿಜಯ್ ಕುಮಾರ್ ಶೆಟ್ಟಿ, ನಂದನ್ ಮಲ್ಯ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ ರಾವ್, ನೀಲೇಶ್ ಕಾಮತ್, ವಿನೋದ್ ಮೆಂಡನ್, ಮೋಹನ್ ಪೂಜಾರಿ, ರಾಜೇಂದ್ರ, ಪ್ರಕಾಶ್, ರಾಹುಲ್, ರಾಮ್ ಪ್ರಸಾದ್, ಪ್ರಶಾಂತ ಮರೋಳಿ ಮುಂತಾದವರ ಸಹಿತ ಉಪಸ್ಥಿತರಿದ್ದರು