ಮಂಗಳೂರು: ದ .ಕ .ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ 23-24 ರ೦ದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಘೋಷಣೆಯಿಂದ ನಡೆಯಲಿದೆ ಎಂದು ಕಸಾಪ ದ.ಕ. ಅಧ್ಯಕ್ಷ ಡಾ .ಎಂ .ಪಿ. ಶ್ರೀನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.ಇಡೀ ಸಾಹಿತ್ಯದ ಸಂಭ್ರಮವು ಅಮೃತ ಸೋಮೇಶ್ವರ ನಗರದಲ್ಲಿ, ಮಿಜಾರು ಆನಂದ ಆಳ್ವ ವೇದಿಕೆ, ಕೇಶವ ಕುಡ್ಲ ಪುಸ್ತಕ ಮಳಿಗೆ,ಕೆ ಟಿ ಗಟ್ಟಿ ಮಹಾದ್ವಾರ ಮಾಡಿ ನಡೆಸಲು ಆಯೋಜನ ಸಮಿತಿ ನಿರ್ಯಿಸಲಾಗಿದೆ.ಉದ್ಘಾಟನೆಯನ್ನು ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ ಮಾಡುವರು. ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ದಕ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಮಾಡುವರು ಎ೦ದವರು ತಿಳಿಸಿದರು.
ಸುಮಾರು ಹತ್ತು ಪುಸ್ತಕ ಮಳಿಗೆಗಳು ಬರುವ ನಿರೀಕ್ಷೆ ಇದ್ದು ,ಖಾದಿ ಹಾಗೂ ಗ್ರಾಮೋದ್ಯೋಗ, ಮಹಿಳಾ ಸಭಲೀಕರಣ ಉತ್ಪನ್ನಗಳ ಪ್ರದರ್ಶನ ಸೇರಿದಂತೆ 60 ವಿವಿಧ ಮಳಿಗೆಗಳನ್ನು ನಿರೀಕ್ಷಿಸಲಾಗಿದೆ.
ಈಗಾಗಲೇ ಹತ್ತು ಪುಸ್ತಕ ಬಿಡುಗಡೆಗೆ ಪ್ರಕಾಶಕರು ಹಾಗೂ ಬರಹಗಾರರು ನೊಂದಾವಣೆ ಮಾಡಿದ್ದಾರೆ. ಹೆಚ್ಚಿನ ಪುಸ್ತಕಗಳನ್ನು ನಿರೀಕ್ಷಿಸಲಾಗಿದೆ ಎ೦ದರು.
ಮಾಜಿ ಕಸಾಪ ಅಧ್ಯಕ್ಷಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪುಸ್ತಕಗಳನ್ನು ಬಿಡುಗಡೆ ಮಾಡುವರು. ಅವರಿಗೆ ಜೊತೆಯಾಗಿ ಜಿ.ಪಂ. ಮುಖ್ಯಾಧಿಕಾರಿ ಆನಂದ್ ಕೆ ಹಾಗೂ ಮಹಾನಗರ ಪಾಲಿಕೆಯ ಮುಖ್ಯಾಧಿಕಾರಿ ಆನಂದ ಎಲ್ ಇರುವರು.ಈ ಬಾರಿ ಸಾಹಿತಿಗಳು, ಸಂಶೋದಕರು, ಸಂಘಟಕರು ಜೊತೆಯಲ್ಲಿ ಸಮ್ಮೇಳನದ ಮುಖಂಡತ್ವ ವಹಿಸಿಕೊಂಡಿದ್ದಾರೆ.ಹೆಚ್ಚಿನ ವಿದ್ಯಾರ್ಥಿಗಳನ್ನು ಕನ್ನಡದ ಸಂಭ್ರಮಕ್ಕೆ ಜೊತೆಯಲ್ಲಿ ಸೇರಿಕೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಇರುವಂತೆ ಆಯೋಜನೆ ಮಾಡಲಾಗಿದೆ.,ಹಿರಿಯ ಹಾಗೂ ಕಿರಿಯರ ಕವಿ ಗೋಷ್ಟಿ, ಹಿರಿಯ ಪತ್ರಕರ್ತರಿಂದಲೇಗೋಷ್ಟಿ,ಮತ್ತು ಇತರ ವಿವಿಧ ಸಾಂಸ್ಕೃತಿಕ ಗೋಷ್ಟಿಗಳು ಆಯೋಜಿಸಲಾಗಿದೆ ಎ೦ದವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನಾ ಸಮಿತಿ ಮಾಧವ ಎ೦.ಕೆ., ಮ೦ಜುನಾಥ ರೇವಣ್ಕರ್. ಡಾ. ಮುರಳಿ ಮೋಹನ್ ಚು೦ತಾರ್, ವಿನಯ ಆಚಾರ್, ಪುಷ್ಪರಾಜ್,ರೇಮ೦ಡ್ ಡಿಕುನ್ನಾ ಉಪಸ್ಥಿತರಿದ್ದರು.