ಎಣ್ಮೂರು: ತುಳು ನಾಡಿನ ಐತಿಹಾಸಿಕ ಕ್ಷೇತ್ರ ಎಣ್ಮೂರು ಶ್ರೀ ಆದಿ ಬೈದೆರುಗಳ ನೇಮೋತ್ಸವವು ಮಾ.23 ಶನಿವಾರ ಪೂರ್ವ ಸಂಪ್ರದಾಯದಂತೆ ಸುಗ್ಗಿ ತಿಂಗಳ ಪೂವೆಯಂದು ಜರುಗಲಿರುವುದು .
ಬೆಳಿಗ್ಗೆ 8 ಗಂಟೆಗೆ ನಾಗ ತಂಬಿಲ,8.30 ಮೂಹೂರ್ತ ತೋರಣ ನಡೆಯಲಿದೆ.ಮಧ್ಯಾಹ್ನ ಗಂಟೆ 12.30ಕ್ಕೆ ಎಣ್ಮೂರು ಕಟ್ಟ ಬೀಡಿನಿಂದ ಭಂಡಾರ ಹೊರಡುವುದು – ನೇತ್ರಾದಿ ಗರಡಿಯಲ್ಲಿ ದರ್ಶನ.ರಾತ್ರಿ ಗಂಟೆ 8ಕ್ಕೆ ಬೈದೆರುಗಳು ಗರಡಿ ಇಳಿಯುವುದು
ರಾತ್ರಿ ಗಂಟೆ 2ಕ್ಕೆ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ.ಪ್ರಾತಃಕಾಲ ಗಂಟೆ 3.30ಕ್ಕೆ ಎಣ್ಮೂರು ಕಟ್ಟ ಬೀಡಿಗೆ ಬೈದೆರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು
ಬೆಳಿಗ್ಗೆ ಗಂಟೆ 7ಕ್ಕೇ ಬೈದೆರುಗಳಲ್ಲಿ ಅರಿಕೆ,ಗಂಧ ಪ್ರಸಾದ ತುಲಾಭಾರ ಜರುಗಲಿದೆ.ಮದ್ಯಾಹ್ನ ಮತ್ತು ರಾತ್ರಿ ಮಹಾ ಅನ್ನ ಸಂತರ್ಪಣೆನಡೆಯಲಿರುವುದು.