ಮ೦ಗಳೂರು: ಶೈಕ್ಷಣಿಕ ವರ್ಷದ ಪರೀಕ್ಷೆಗಳು ಮುಕ್ತಾಯಗೊಂಡು ಬೇಸಿಗೆ ರಜಾ ದಿನಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಹಾಗೂ ಸಮಯದ ಸದುಪಯೋಗದೊಂದಿಗೆ ಕ್ರಿಯಾಶೀಲ ಚಟುವಟಿಕಗಳಲ್ಲಿತೊಡಗಿಸಿಕೊಳ್ಳುವ ಸಲುವಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ತನ್ನ ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ವಿಕಸನ ಬೇಸಿಗೆ ಶಿಬಿರ-2024 ನ್ನು ಕೆನರಾ ಸಿಬಿಎಸ್ಇ ಶಾಲೆಯಲ್ಲಿಆಯೋಜಿಸುತ್ತಿದೆ.
ದಿನಾಂಕ 3-4-2024 ರಿಂದ 12-04-2024ರವರೆಗೆ ಬೆಳಿಗ್ಗೆ 9ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯುವ ವಿಕಸನ ಬೇಸಿಗೆ ಶಿಬಿರದಲ್ಲಿ ಯಾವುದೇ ಶಾಲೆಯ 8 ವರ್ಷದಿಂದ 14 ವರ್ಷ ವಯೋಮಾನದ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಥಿಗಳ ಮೃದು ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಬಗೆಹರಿಸುವ ಕೌಶಲಗಳು, ಜುಂಬ, ರಂಗಭೂಮಿ ಅಭಿನಯ ಕೌಶಲ, ಹೊರಾಂಗಣ ಚಟುವಟಿಕೆ, ಹಣಕಾಸಿನ ಸಾಕ್ಷರತೆ, ಬೂಟ್ ಕ್ಯಾಂಪ್ ಚಟುವಟಿಕೆ, ಕರಕುಶಲ, ಮನರಂಜನ ಆಟಗಳು ಇತ್ಯಾದಿ ಈ ಶಿಬಿರದ ವೈಶಿಷ್ಟ್ಯಗಳಾಗಿವೆ.ಅದೇ ರೀತಿ ಕೆನರಾ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಏಪ್ರಿಲ್ 3 ರಿಂದ ಏಪ್ರಿಲ್ 26 ರವರೆಗೆ ವಾಲಿಬಾಲ್,ಕಬ್ಬಡಿ,ತ್ರೋಬಾಲ್,ಟೇಬಲ್ ಟೆನ್ನಿಸ್, ಕ್ರಿಕೆಟ್ ಇವುಗಳಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ.ಯಾವುದೇ ಶಾಲೆಯ 10 ರಿಂದ 17 ರವಯೋಮಿತಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಈ ತರಬೇತಿ ಆಯೋಜಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ದೂರವಾಣಿ 9900714702/0824-2 494713 ಈ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಪ್ರಕಟಣೆ ತಿಳಿಸಿದೆ.