ಮಂಗಳೂರು: ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್ (ರಿ) ಅಗಲ್ಪಾಡಿ ವತಿಯಿಂದ ಮಾ.27ರಿಂದ ಏ.3ರ ವರೆಗೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿ ಯಾಗ, ಋಕ್ ಸಂಹಿತಾ ಯಾಗ, ಐಕ್ಯಮತ್ಯ ಹೋಮ, ರುದ್ರ ಹೋಮ, ಧನ್ವಂತರಿ ಹೋಮ ಮತ್ತು ಸಹಸ್ರ ಚಂಡಿಕಾ ಯಾಗ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೋಳಿಕ್ಕಜೆ ಅನಂತಗೋವಿಂದ ಶರ್ಮ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ಸಂಜೆ 5 ಗಂಟೆಯ ಗೋಧೂಳಿ ಲಗ್ನದಲ್ಲಿ ಉಗ್ರಾಣ ಮುಹೂರ್ತ, ಚಂಡಿಕಾ ಯಾಗಶಾಲೆಯಲ್ಲಿ ವಾಸ್ತುರಕ್ಷೋಘ್ನ ಹೋಮ ನಡೆಯಲಿದೆ. ಮಾ.27ರಂದು ಮುಂಜಾನೆ 5ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದು ಅಷ್ಟೋತ್ತರ ಸಹಸ್ರನಾರೀಕೇಳ ಗಣಪತಿಯಾಗದ ಕಲಶ ಪ್ರತಿಷ್ಠೆ, ಬೆಳಗ್ಗೆ 11.30ಕ್ಕೆ ಗಣಪತಿ ಯಾಗದ ಪೂರ್ಣಾಹುತಿ ನಡೆದ ಬಳಿಕ ಋಕ್ ಸಂಹಿತಾ ಯಾಗ ಪ್ರಾರಂಭವಾಗಲಿದೆ.
ಮಾ.28ರಂದು ಬೆಳಗ್ಗೆ 6ಕ್ಕೆ ಕಲಶ ಸ್ಥಾಪನೆ, ಐಕ್ಯಮತ್ಯ ಹೋಮ, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ, ಮಾ.29ರಂದು ಬೆಳಗ್ಗೆ 7ರಿಂದ ರುದ್ರ ಹೋಮ ಪ್ರಾರಂಭ, ಸಹಸ್ರ ಚಂಡಿಕಾಯಾಗದ ಶಾಲಾ ಪ್ರವೇಶ, ಬೆಳಗ್ಗೆ 11ಕ್ಕೆ ರುದ್ರ ಹೋಮ ಪೂರ್ಣಾಹುತಿ, ಮಾ.30ರಂದು ಮುಂಜಾನೆ 6ರಿಂದ ಧನ್ವಂತರಿ ಹೋಮ ಪ್ರಾರಂಭ, ಬೆಳಗ್ಗೆ 10.30ಕ್ಕೆ ಪೂರ್ಣಾಹುತಿ, ಮಾ.30ರಂದು ಮುಂಜಾನೆ ಧನ್ವಂತರಿ ಹೋಮ ಪ್ರಾರಂಭ, ಬೆಳಗ್ಗೆ 10.30ಕ್ಕೆ ಪೂರ್ಣಾಹುತಿ, ಮಾ.31ರಂದು ದುರ್ಗಾ ಸಪ್ತಶತಿ ಪಾರಾಯಣ, ಬೆಳಗ್ಗೆ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ, ಏ.1ರಂದು ದುರ್ಗಾ ಸಪ್ತಶತಿ ಪಾರಾಯಣ, ಬೆಳಗ್ಗೆ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ, ಏ.2ರಂದು ದುರ್ಗಾ ಸಪ್ತಶತಿ ಪಾರಾಯಣ, ಬೆಳಗ್ಗೆ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ ನಡೆಯಲಿದೆ.
ಏ.3ರಂದು ಮುಂಜಾನೆ 5 ಗಂಟೆಗೆ ಅಗ್ನಿ ಪ್ರತಿಷ್ಠೆ, ಸಹಸ್ರ ಚಂಡಿಕಾಯಾಗ ಆರಂಭ, ಬೆಳಗ್ಗೆ 10 ಗಂಟೆಗೆ ಋಕ್ ಸಂಹಿತಾಯಾಗದ ಪೂರ್ಣಾಹುತಿ, ಪೂಜೆ, ಬೆಳಗ್ಗೆ 11 ಗಂಟೆಗೆ ಸಹಸ್ರ ಚಂಡಿಕಾಯಾಗದ ಪೂರ್ಣಾಹುತಿ, ಪೂಜೆ ನೆರವೇರಲಿದೆ ಎಂದರು.
ಯಾಗ ಸಮಿತಿ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಮಾ.29ರಿಂದ ಏ.3ರ ವರೆಗೆ ಪ್ರತಿದಿನ ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಮಹಾ ಮಂತ್ರಾಕ್ಷತೆ ನಡೆಯಲಿದೆ.ಯಾಗಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 11.30ಕ್ಕೆ ಮಹಾಪೂಜೆ ಮತ್ತು ಸಂಜೆ 6 ಗಂಟೆಗೆ ಅಷ್ಠಾವಧಾನ ಸೇವೆ, 7.30ಕ್ಕೆ ಯಾಗಶಾಲೆಯಲ್ಲಿ ಮಹಾಪೂಜೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 7.45ರಿಂದ ಉಪಹಾರ, ಮಧ್ಯಾಹ್ನ 1 ಗಂಟೆಯಿಂದ ಸಂತರ್ಪಣೆ, ರಾತ್ರಿ 8 ಗಂಟೆಯಿಂದ ಪ್ರಸಾದ ಭೋಜನ ಇರಲಿದೆ ಎಂದರು.
ಸೇವಾ ಸಂಘದ ಕಾರ್ಯದರ್ಶಿ ಶ್ರೀಕಾಂತ್ ಗುಲುಗುಂಜಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮ ಜರಗಲಿದೆ. ಮಾ.26ರಂದು ರಾತ್ರಿ 8 ಗಂಟೆಗೆ ಯಕ್ಷಗಾನ ಬಯಲಾಟ.ಮಾ.27ರಂದು ರಾತ್ರಿ 8ರಿಂದ ಶಾಸ್ತ್ರೀಯ ಸಂಗೀತ ಕಛೇರಿ,ಮಾ.29ರಂದು ರಾತ್ರಿ 8 ರಿಂದ ನೃತ್ಯಾರ್ಪಣಂ ಕಾರ್ಯಕ್ರಮ,ಮಾ.31ರಂದು ರಾತ್ರಿ 8ರಿಂದ ವಿದುಷಿ ಕೋವಿಲಡಿ ಆರ್. ಕಲಾ ಮೈಸೂರು ಅವರಿಗೆ ಗುರುವಂದನೆ ಕಾರ್ಯಕ್ರಮ, ರಾತ್ರಿ 8.15ರಿಂದ ಶಾಸ್ತ್ರೀಯ ಸಂಗೀತ ಕಛೇರಿ ,ಏ.1ರಂದು ರಾತ್ರಿ ಸಂಗೀತ ಕಛೇರಿ ಹಾಗೂ ಏ.2ರಂದು ಮಣಿಪಾಲ ವಿಪಂಚಿ' ಬಳಗದವರಿಂದ ಪಂಚ ವೀಣಾವಾದನ ವಿಶೇಷ ಕಾರ್ಯಕ್ರಮ ಹಾಗೂ ರಾತ್ರಿ 8ರಿಂದ ಶಾಸ್ತ್ರೀಯ ಸಂಗೀತ ಕಛೇರಿ, ರಾತ್ರಿ 8.45ರಿಂದ ಭಕ್ತಿ ಸಂಗೀತ, ರಾತ್ರಿ 9.15ರಿಂದ ಭರತನಾಟ್ಯ, ರಾತ್ರಿ 9.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ,ಏ.3ರಂದು ರಾತ್ರಿ ಖ್ಯಾತ ವಯಲಿನ್ ವಾದಕ ವಿದ್ವಾನ್ ಸಿ.ಎಸ್.ಅನುರೂಪ್ ತ್ರಿಶ್ಯೂರ್ ಹಾಗೂ ಅವರ ಶಿಷ್ಯೆ ಅಂತಾರಾಷ್ಟ್ರೀಯ ಖ್ಯಾತಿಯ ಬಾಲಕಿ ಕು.ಗಂಗಾ ಶಶಿಧರನ್ ತ್ರಿಶ್ಯೂರ್ ಬತ್ತು ಬಳಗದವರಿಂದ
ದ್ವಂದ್ವ ವಯಲಿನ್’ ವಾದನದ ವೈವಿದ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಚಾರ ಸಮಿತಿಯ ಅಧ್ಯಕ್ಷ ರಾಜೇಶ್ ಮಾಸ್ಟರ್ ಅಗಲ್ಪಾಡಿ ಉಪಸ್ಥಿತರಿದ್ದರು.