ಮಂಗಳೂರು: ನಗರದ ಕುಲಶೇಖರದ ಹೋಲಿ ಕ್ರಾಸ್ ಚರ್ಚಿನಲ್ಲಿ ಮಾ.25 ರ ಸಂಜೆ 4.30 ಗಂಟೆಗೆ ನಗರದ ಸಿಟಿ ವಲಯದ 12 ಚರ್ಚುಗಳ ಸುಮಾರು 200ಕ್ಕೂ ಮಿಕ್ಕಿ ಕಲಾವಿದರು ಹಾಗೂ ನಿರೂಪಕರಿಂದ “ಶಿಲುಬೆಯ ಹಾದಿ” (ಖುರ್ಸಾಚಿ ವಾಟ್) ಕಾರ್ಯಕ್ರಮ ನಡೆಸಲಾಗುವುದು ಎಂದು ಕಾರ್ಡೆಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಮಂಗಳೂರಿನ ಕುಲಶೇಖರ (ಕಾರ್ಡೆಲ್), ವಾಮಂಜೂರ್, ಪಾಲ್ದಾನೆ, ಬೊಂದೇಲ್, ದೆರೆಬೈಲು, ನೀರುಮಾರ್ಗ, ಕೆಲರೈ, ಬಜ್ಜೊಡಿ, ಕಪಿತಾನಿಯೋ, ಬಜಾಲ್, ಪೆರ್ಮಾಯಿ, ಶಕ್ತಿನಗರ ಚರ್ಚುಗಳ ಕಲಾವಿದರು ಹಾಗೂ ಪ್ರತಿ ಚರ್ಚಿನಿಂದ ಪ್ರತಿ ನಿಲ್ದಾಣಕ್ಕೆ (ಸ್ಟೇಶನ್) 3 ಜನ ನಿರೂಪಕರು ಈ ಶಿಲುಬೆಯ ಹಾದಿಯನ್ನು ನಡೆಸಲಿರುವರು. ಕಾರ್ಡೆಲ್ ಚರ್ಚಿನ ವಠಾರದಲ್ಲಿ ಈ ಕಾರ್ಯಕ್ರಮ ನಡೆಯಲಿರುವುದು.. 12 ಚರ್ಚುಗಳ ಎಲ್ಲಾ ಭಕ್ತವೃಂದದವರು ಶಿಲುಬೆಯ ಹಾದಿಯಲ್ಲಿ ಭಾಗವಹಿಸಲಿದ್ದು, ಸುಮಾರು 6 ರಿಂದ 7 ಸಾವಿರ ಜನರು ಭಾಗವಹಿಸುವ ನೀರಿಕ್ಷೆಯನ್ನು ಇಡಲಾಗಿದೆ ಎ೦ದವರು ತಿಳಿಸಿದ್ದಾರೆ.