20.5 C
Karnataka
Friday, November 15, 2024

‘ಉತ್ತಮ ಅರೋಗ್ಯಕ್ಕಾಗಿ ಸಂಗೀತ ಆಲಿಸಿ’

ಮಂಗಳೂರು: ‘ಶಾಸ್ತ್ರೀಯ ಸಂಗೀತದ ರಾಗಗಳು ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವುದು ನಿಜ. ಇದು
ವೈಜ್ಞಾನಿಕವಾಗಿ ರುಜುವಾಗಿದೆ. ಹಾಗಾಗಿ ಅರೋಗ್ಯಕರ ಜೀವನಕ್ಕಾಗಿ ಉತ್ತಮ ಸಂಗೀತ ಆಲಿಸಿ’ ಎಂದು ಖ್ಯಾತ ವೈದ್ಯ ಡಾ.
ಅಶೋಕ ಶೆಣೈ ಸಲಹೆ ನೀಡಿದರು.
ವೈದ್ಯ ಕೆ. ಆರ್. ಕಾಮತ್ ಅವರ ನಿವಾಸ ‘ಶ್ರೀ ರಾಮಪ್ರಸಾದ್’ದಲ್ಲಿ ಕಲಾಶಾಲೆ ಮತ್ತು ಸ್ವರಾಲಯ ಸಾಧನಾ
ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ 79ನೇ ಮನೆ ಮನೆಯಲ್ಲಿ ಸ್ವರಾಲಯ ಸಾಧನಾ ಶಿಬಿರವನ್ನು ಉದ್ಘಾಟಿಸಿ ಅವರು
ಮಾತನಾಡಿದರು.
‘ನಗರದ ವೈದ್ಯಕೀಯ ಕಾಲೇಜುಗಳು ಕೂಡ ಸಂಗೀತ ಚಿಕಿತ್ಸೆ (ಮ್ಯೂಸಿಕಲ್ ತೆರಪಿ) ಕುರಿತಂತೆ ಪ್ರಯೋಗಗಳನ್ನು ನಡೆಸಿ
ಯಶಸ್ಸು ಕಂಡಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುವವರಿಗೆ, ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸಂಗೀತ ಚಿಕಿತ್ಸೆ ನೀಡಿದಾಗ ಅವರ
ದೇಹಗಳಲ್ಲಿ ಸಕರಾತ್ಮಕವಾಗಿ ಬದಲಾವಣೆಗಳು ಆಗಿರುವುದು ದೃಢವಾಗಿದೆ’ ಎಂದರು.
‘ಮುಂಜಾವಿನ ಹೊತ್ತು ಭಕ್ತಿ ಭಾವದ ಭೈರವಿ ರಾಗ ಅಲಿಸಿದರೆ ಮನಸ್ಸು ಅರಳುವುದು. ಅದೇ ಬೇಸರದಲ್ಲಿ
ಇರುವವರು ತೋಡಿ, ದರ್ಬಾರಿ ಕಾನಡದಂತಹ ರಾಗಗಳನ್ನು ಆಲಿಸಿದರೆ ಅವರ ಮನಸ್ಸು ಮತ್ತಷ್ಟು ಮಂಕಾಗಬಹುದು. ಯಮನ್
ರಾಗವನ್ನು ಆಲಿಸಿದರೆ ಮನಸ್ಸು ಪುಳಕಗೊಳ್ಳುವುದು. ಹೀಗೆ ರಾಗಗಳಿಗೂ ನಮ್ಮ ಮನಸ್ಥಿತಿಗೂ ನೇರ ಸಂಬಂಧ ಇದೆ’ ಎಂದು
ವಿವರಿಸಿದರು.
‘ಯಾವುದೇ ಶಾಸ್ತ್ರೀಯ ಸಂಗೀತದ ಸಾಧನೆಗೆ ಔಪಚಾರಿಕ ಶಿಕ್ಷಣ ಹಾಗೂ ದೀರ್ಘ ಕಾಲದ ಅಭ್ಯಾಸ ಅಗತ್ಯ. ಇದರಲ್ಲಿ ಗುರುಗಳ
ಪಾತ್ರ ಅತ್ಯಂತ ಮಹತ್ವದ್ದು. ಸಂಗೀತದಲ್ಲಿ ಗುರುಗಳು ಅಂದರೆ ದೇವರಿಗೆ ಸಮಾನ. ಗುರುಗಳಲ್ಲಿ ಸರಸ್ವತಿಯನ್ನು ಕಂಡು ಕಠಿಣ
ಸಾಧನೆ ಮಾಡಿದರೆ ಯಶಸ್ಸು ಸಾಧ್ಯ’ ಎಂದು ಡಾ. ಅಶೋಕ ಶೆಣೈ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಸ್ವರಾಲಯ ಸಾಧನಾ ಶಿಬಿರ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು. ಸಂಗೀತದಲ್ಲಿ ತಾಳ ಮತ್ತು ಲಯ ಇದರ ಮಹತ್ವದ
ಕುರಿತು ಪನ್ನಗ ಶರ್ಮನ್ ಶೃಂಗೇರಿ ಅವರು ಪ್ರಾತ್ಯಕ್ಷಿಕೆ ನೀಡಿದರು. ಸಮಾರೋಪದಲ್ಲಿ ಖ್ಯಾತ ಕಲಾವಿದ ಕಾಸರಗೋಡು ಚಿನ್ನಾ,
ಶಿಕ್ಷಕಿ ಸುಚಿತ್ರಾ ಎಸ್ ಶೆಣೈ ಭಾಗವಹಿಸಿದ್ದರು.
ಬಳಿಕ ಕು. CA ಶ್ರೇಷ್ಠಲಕ್ಷ್ಮೀ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ವಿಶ್ವಾಸ್ ಕೃಷ್ಣ
ಹಾಗೂ ಮೃದಂಗದಲ್ಲಿ ಪನ್ನಗ ಶರ್ಮನ್, ಶೃಂಗೇರಿ ಸಹಕರಿಸಿದರು.
ಡಾ. ಕೆ. ಆರ್. ಕಾಮತ್, ಡಾ. ಸುಮಾ ಕಾಮತ್, ಡಾ. ಶ್ರೀರಕ್ಷಾ, ವಿದುಷಿ ರಶ್ಮಿ ಶ್ರೀನಿವಾಸ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles