ಅಗಲ್ಪಾಡಿ : ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್ ಅಗಲ್ಪಾಡಿ ವತಿಯಿಂದ ನಡೆಯುವ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಪ್ರಯುಕ್ತ ಭಾನುವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ರಾತ್ರಿ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ನೆರವೇರಿತು.
ಬೆಳಗ್ಗೆ ದುರ್ಗಾ ಸಪ್ತಶತಿ ಪಾರಾಯಣ, ಕಲಶಪೀಠದಲ್ಲಿ ಮಹಾಪೂಜೆ ನಡೆಯಿತು. ಯಾಗದ ಪ್ರಯುಕ್ತ ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಮಹಾ ಮಂತ್ರಾಕ್ಷತೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ವಿದುಷಿ ಕೋವಿಲಡಿ ಆರ್.ಕಲಾ ಮೈಸೂರು ಅವರಿಗೆ ಗುರುವಂದನೆ ನಡೆದು ಬಳಿಕ ಅಶ್ವಿನಿ ಕೋಳಿಕ್ಕಜೆ, ವಿದುಷಿ ಅರ್ಚನಾ ಎಲ್.ರಾವ್ ಮೈಸೂರು ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
ಏ.1ರ ಕಾರ್ಯಕ್ರಮ
ಏ.1ರಂದು ಮುಂಜಾನೆ ದುರ್ಗಾ ಸಪ್ತಶತೀ ಪಾರಾಯಣ, ಬೆಳಗ್ಗೆ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.1ರಂದು ರಾತ್ರಿ 8ರಿಂದ ವಿದ್ವಾನ್ ಚೆಂಗೋಟೈ ಹರಿಹರ ಸುಬ್ರಹ್ಮಣ್ಯ ಅಯ್ಯರ್ ಅವರಿಂದ ಸಂಗೀತ ಕಛೇರಿ ನಡೆಯಲಿದೆ.