20.1 C
Karnataka
Friday, November 15, 2024

ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ: ಫೂಟ್‌ಪ್ರಿಂಟ್ಸ್ 2024

ಬೆ೦ಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಈಶಾನ್ಯ ಭಾರತ ಮತ್ತು ಟಿಬೆಟಿಯನ್ ವಿದ್ಯಾರ್ಥಿಗಳ ವೇದಿಕೆ (NETSF) ಏಪ್ರಿಲ್ 13, ರಂದು ಭಾರತದ ಈಶಾನ್ಯ ಪ್ರದೇಶ ಮತ್ತು ಟಿಬೆಟ್‌ನ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಆಚರಿಸಲು ತನ್ನ ವಾರ್ಷಿಕ ಕಾರ್ಯಕ್ರಮವಾದ ಫೂಟ್‌ಪ್ರಿಂಟ್ಸ್ 2024 ಆಯೋಜಿಸಿತ್ತು.


ಕಾರ್ಯಕ್ರಮವು ಬ್ಯಾಂಡ್ ಬಾಯ್ಸ್ ಓವರ್ ಫ್ಲವರ್ಸ್ ಅವರ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು, ನಂತರ ನಾಗಾಲ್ಯಾಂಡ್‌ನ ಮಿನೋಲಿ ಅವರ ಸೋಲೋ; ಕಿಕ್ಯೊ ಇರೋ ಬ್ಯಾಂಡ್‌ನ ಪ್ರದರ್ಶನ; ಸಿಕ್ಕಿಂ ಮತ್ತು ಡಾರ್ಜಿಲಿಂಗ್‌ನ ವಿದ್ಯಾರ್ಥಿಗಳ ಝ್ಯಾವ್ರೆ; ಟಿಬೆಟ್, ಲಡಾಖ್ ಮತ್ತು ಮಿಜೋರಾಂನ ವಿದ್ಯಾರ್ಥಿಗಳ ಸಾಂಪ್ರದಾಯಿಕ ಆಮ್ಡೋ, ತ್ಸಿ ತ್ಸಿ ಮತ್ತು ಚೆರಾವ್ ನೃತ್ಯಗಳನ್ನು ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿ, ದಲೈಲಾಮಾ ಉನ್ನತ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ತೆಂಜಿನ್ ಪಸಾಂಗ್ ಮತ್ತು ಉಪಕುಲಪತಿಗಳಾದ ರೆ.ಡಾ. ವಿಕ್ಟರ್ ಲೋಬೋ ಎಸ್.ಜೆ. ಅವರು ಟಿಬೆಟ್ ಮತ್ತು ಭಾರತದ ಈಶಾನ್ಯ ಭಾಗದ ಸಂಸ್ಕೃತಿಗಳ ಬಗ್ಗೆ ಮಾತನಾಡಿದರು .
ಮಣಿಪುರದ ಜನತೆಗಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು, ನಂತರ ಟಿಬೆಟಿಯನ್ ಸನ್ಯಾಸಿಗಳು ಪ್ರಾರ್ಥನೆ ಸಲ್ಲಿಸಿದರು.
ಮಣಿಪುರದ ಕುಕಿ-ಜೋಮಿಯಿಂದ ಮೇಘಾಲಯದ ಖಾಸಿ-ಗಾರೋ-ಜೈಂತಿಯಾ ನೃತ್ಯದವರೆಗೂ, ಈಶಾನ್ಯ ಭಾರತದ ಸಂಸ್ಕೃತಿಗಳನ್ನು ಪ್ರಸ್ತುತಪಡಿಸಿದರು. ಸಿಕ್ಕಿಮ್, ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಲಡಾಖ್ ಮತ್ತು ಮಣಿಪುರದ ಎಲ್ಲಾ ಮನೋಹರ ಪ್ರದರ್ಶನಗಳನ್ನು ಪ್ರದರ್ಶಿಸಿದ್ದರು. ಈಶಾನ್ಯ ಭಾರತ, ಲಡಾಖ್ ಮತ್ತು ಟಿಬೆಟ್‌ನ ಸಮೃದ್ಧವಾದ ಉಡುಪುಗಳನ್ನು ಪ್ರದರ್ಶಿಸುವ ಫ್ಯಾಷನ್ ಶೋ ಪ್ರದರ್ಶನಗಳು ಪ್ರೇಕ್ಷಕರ ಮನರಂಜಿಸಿತು.
800ಕ್ಕೂ ಹೆಚ್ಚು ಜನರ ಕಾರ್ಯಕ್ರಮವನ್ನು ಆನಂದಿಸಿದರು ಮತ್ತು ವಿಶ್ವವಿದ್ಯಾಲಯದ ಮೈದಾನದಾದ್ಯಂತ ಸ್ಥಾಪಿಸಲಾದ ಸ್ಟಾಲ್‌ಗಳು ವಿವಿಧ ಆಹಾರ ಪದಾರ್ಥಗಳನ್ನು ಉಣಬಡಿಸಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles