20.1 C
Karnataka
Tuesday, November 26, 2024

ಮೇ-11-13:ವಾಮ೦ಜೂರಿನಲ್ಲಿ ಬೃಹತ್ ಕೃಷಿ ಮೇಳ

ಮ೦ಗಳೂರು: ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಟಾನ ತಿರುವೈಲು ವಾಮ೦ಜೂರು,ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ,ದ.ಕ.ಜಿಲ್ಲಾ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ , ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ,ಸಾವಯವ ಕೃಷಿಕರ ಬಳಗ ಮ೦ಗಳೂರು, ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವ-ಸಹಾಯ ಸ೦ಘ ಸಹಯೋಗದಲ್ಲಿ ವಾಮ೦ಜೂರಿನಲ್ಲಿ ಬೃಹತ್ ಕೃಷಿ ಮೇಳ ಮತ್ತು ಅಮೃತೇಶ್ವರ ಯಕ್ಷಗಾನ ಪ್ರತಿಷ್ಟಾನದ ದಶಮ ಸ೦ಭ್ರಮ ಮೇ11,12, ಮತ್ತು 13ರಂದು ಜರಗಲಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರು ಮತ್ತು ಸಮಿತಿಯ ಗೌರವಾಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಚೇರಿ ಯಲ್ಲಿ ಶುಕ್ರವಾರ ಕೃಷಿ ಮೇಳ,ಅಮೃತೇಶ್ವರ ಯಕ್ಷಗಾನ ಪ್ರತಿಷ್ಟಾನದ ದಶಮ ಸ೦ಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದ ಅವರು ‌ವಾಮ೦ಜೂರು ಶ್ರೀ ಅಮೃತೇಶ್ವರ ದೇವಸ್ಠಾನದ ಮು೦ಭಾಗ ಬೃಹತ್ ಕೃಷಿ ಮೇಳ ಮತ್ತು ಅಮೃತೇಶ್ವರ ಯಕ್ಷಗಾನ ಪ್ರತಿಷ್ಟಾನದ ದಶಮ ಸ೦ಭ್ರಮ ನಡೆಯಲಿದೆ.ಕೃಷಿ , ಜಾನುವಾರು ಮೇಳ, ಶ್ವಾನ ಪ್ರದಶ೯ನ, ಆಹಾರಮೇಳ, ಕೃಷಿ ವಿಚಾರಗೋಷ್ಠಿ, ಕೃಷಿ ಮಾಹಿತಿ, ಯಕ್ಷಗಾನ ಸ್ಪಧೆ೯, ಕ೦ಬಳ ಕೂಟ ದೇಸಿ ಗೋತಳಿಗಳ ಪ್ರದಶ೯ನ ಕಬಡ್ಡಿ ಪ೦ದ್ಯಾಟ ಸಾಂಸ್ಕೃತಿಕ ,ಜಾನಪದ ,ಕ್ರೀಡಾಕೂಟ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎ೦ದರು.
ಜನ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು ,ಸಮಾಜ ಸೇವಕರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎ೦ದವರು ವಿವರಿಸಿದರು.
ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ,ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ ,ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಓಂ ಪ್ರಕಾಶ್ ,ಶ್ರೀ ಉಮಾಮಹೇಶ್ವರ, ಮಹಾಗಣಪತಿ ದೇವಸ್ಥಾನದಮುಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆನವೀನ್ ಚಂದ್ರ ಆಳ್ವ ತಿರುವೈಲುಗುತ್ತು ದೀಪಕ್ ಶೆಟ್ಟಿ ಲಿಂಗಮಾರುಗುತ್ತು , ಚಂದ್ರಹಾಸ ರೈ , ಪ್ರತೋಷ್ ಮಲ್ಲಿ, ಸಂತೋಷ್ ಶೆಟ್ಟಿ ಶೆಡ್ಡೆ , ಶರತ್ ಶೆಟ್ಟಿ, ನಾಗರಾಜ ರೈ, ಪೂರ್ಣೀಮಾ ಶೆಟ್ಟಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಿಇಓ ಮೊದಲಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles