ಮ೦ಗಳೂರು: ಏಪ್ರಿಲ್ 22 ರ ವಿಶ್ವ ಭೂದಿನದ ಪ್ರಯುಕ್ತ ‘ಪರಿಸರಕ್ಕಾಗಿ ನಾವು’ ಗುಂಪಿನ ದಕ್ಷಿಣ ಕನ್ನಡ ಉಡುಪಿ ಘಟಕದವರಾದ ಸರೋಜಾ ಪ್ರಕಾಶ್- ಪ್ರಕಾಶ್ ದಂಪತಿಯವರು, ಅಶ್ವಿನಿ ಕೆ ಭಟ್ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಭಾನುವಾರ ಸಂಜೆ ಎರಡು ತಾಸು ಸಾರ್ವಜನಿಕರಿಗೆ ಪ್ಲಾಸ್ಟಿಕ್ ಮಿತ ಬಳಕೆ, ಹಸಿ ಕಸದಿಂದ ಗೊಬ್ಬರ ತಯಾರಿ, ಬಯೋ ಎಂಜೈಮ್ ಬಗ್ಗೆ ಪ್ರಾತ್ಯಕ್ಷಿಕೆ ಕೊಟ್ಟರು.
ಮನೆಯಲ್ಲೇ ಲಭ್ಯವಿದ್ದ ಹಳೆ ರಟ್ಟು, ಕಾಗದಗಳನ್ನುಪಯೋಗಿಸಿ, ಹಳೆ ಪಿವಿಸಿ ಪೈಪ್ಗಳಿಗೆ ಅಂಟಿಸಿ ಫಲಕಗಳನ್ನು ಮಾಡಿಘೋಷಣಾ ವಾಕ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.ಸದಸ್ಯೆಯರಾದ ದೇವಕಿ ಜಿ ಕೆ, ಅಂಜನಿ ವಸಂತ್ ಹಾಗೂ ಸಮಾನಮನಸ್ಕರು ಅವರಿಗೆ ಸಹಕರಿಸಿದರು. ಈ ವರ್ಷದ ಭೂದಿನದ ಘೋಷಣೆಯು ‘ ಭೂಗ್ರಹ vs ಪ್ಲಾಸ್ಟಿಕ್’. ಪ್ಲಾಸ್ಟಿಕ್ ನ ದುಷ್ಪರಿಣಾಮಗಳು, ಅದಕ್ಕೆ ಪರ್ಯಾಯ, ಗೊಬ್ಬರ ತಯಾರಿಕೆ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಮುಂದೆಯೂ ಈ ರೀತಿಯ ಸರಳ ವಿಧಾನಗಳಿಂದ ಹೆಚ್ಚಿನ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಒಗ್ಗೂಡಿದರೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸಂಚಾಲಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.