26.6 C
Karnataka
Thursday, November 21, 2024

ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್’ ಉದ್ಘಾಟನೆ

ಮಂಗಳೂರು, :ಇನ್ ಲ್ಯಾಂಡ್ ಬಿಲ್ಡರ್ಸ್‌ ಹಲವು ಸುಂದರ ವಿನ್ಯಾಸದ ಕಟ್ಟಡಗಳ ನಿರ್ಮಾಣ ಮಾಡುವ ಮೂಲಕ ನಗರದ ಸೊಬಗನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತೇಜಸ್ವಿನಿ ಆಸ್ಪತ್ರೆಯ ಸ್ಥಾಪಕರು ಮತ್ತು ನಿಟ್ಟೆ ವಿಶ್ವ ವಿದ್ಯಾನಿಲ ಯದ ಸಹಕುಲಾಧಿಪತಿ ಎಸ್ಎಸ್ಐಒಟಿ ಅಧ್ಯಕ್ಷ ರಾದ ಡಾ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ಅವರು ನಗರದ ಬಿಜೈ ಮುಖ್ಯ ರಸ್ತೆಯ ಬಳಿ ತಲೆಯೆತ್ತಿರುವ ಇನ್‌ಲ್ಯಾಂಡ್ ಬಿಲ್ಡರ್ಸ್‌ ನ ಅತ್ಯಾಧುನಿಕ ವಾಣಿಜ್ಯ ಪ್ರಾಜೆಕ್ಟ್ ‘ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್’ನ್ನು ರವಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಂದು ಕಟ್ಟಡ ಮಾದರಿಯಾಗಿ ಇರಬೇಕಾದರೆ.ಆ ಕಟ್ಟಡ ಸಂಕೀರ್ಣಕ್ಕೆ ಉತ್ತಮವಾದ ಮೂಲಭೂತ ಸೌಕರ್ಯ, ವಿಸ್ತಾರವಾದ ಪಾರ್ಕಿಂಗ್ ಸೌಲಭ್ಯ ಅಗತ್ಯವಿದೆ ನೂತನ ಸಂಕೀರ್ಣಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲು ಕಟ್ಟಡ ನಿರ್ಮಣದಲ್ಲಿ ತೊಡಗಿರುವವರು ಗಮನಹರಿಸಿ ಒದಗಿಸುತ್ತಿರುವುದು ಮಾದರಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆ,ಬೆಂಗಳೂರು, ಮೈಸೂರಿನಲ್ಲಿ ನಿರ್ಮಾಣ ಮಾಡಿ ಖ್ಯಾತಿ ಪಡೆದಿರುವ ಇನ್ಲ್ಯಾಂಡ್ ಬಿಲ್ಡರ್ ದೆಹಲಿಯಲ್ಲಿಯೂ ಕಟ್ಟಡ ನಿರ್ಮಾಣ ಮಾಡಿ ಖ್ಯಾತಿ ಪಡೆಯಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಂಗಳೂರು ಸ್ಮಾರ್ಟ್ ಸಿಟಿಯಾಗುತ್ತಿರುವ ಸಂದರ್ಭದಲ್ಲಿ ಉತ್ತಮ ವಿನ್ಯಾಸ ಗಳ ಕಟ್ಟಡ ನಿರ್ಮಾಣದ ಮೂಲಕ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಸಿಎಐನ ಮಾಜಿ ಅಧ್ಯಕ್ಷ ಎಸ್ .ಎಸ್ .ನಾಯಕ್ ,ಶಾಸಕ ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇನ್ ಲ್ಯಾಂಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಇನ್‌ಲ್ಯಾಂಡ್ ಬಿಸಿನೆಸ್ ಪಾರ್ಕ್ ಮಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸಿ ವ್ಯವಹಾರಗಳಿಗೆ ಉತ್ತಮ ಮತ್ತು ಆಧುನಿಕ ಪರ್ಯಾಯವನ್ನು ನೀಡಲು ಸೂಕ್ತವಾಗಿದೆ. ಇಂದು ಬಹುರಾಷ್ಟ್ರೀಯ ಕಂಪನಿಗಳು ನಗರದಲ್ಲಿ ಶಾಖಾ ಕಚೇರಿಗಳನ್ನು ಸ್ಥಾಪಿಸುತ್ತಿವೆ. ವೈದ್ಯರು ಹೈಟಿಕ್ ಕ್ಲಿನಿಕ್ ಗಳು,ಬ್ಯಾಂಕ್ ಗಳಿಗೆ ಗ್ರಾಹಕ ಸ್ನೇಹಿ ಆವರಣ, ಕೆಫೆಗಳು ಮತ್ತು ರೆಸ್ಟೋರೆಂಟ್ ಗಳಿಗೆ ಸೂಕ್ತ ಸ್ಥಳಗಳು ಬೇಕು. ಫಿಟ್ನೆಸ್ ಕೇಂದ್ರಗಳಿಗೆ ಕಸ್ಟಮೈಸ್ ಮಾಡಿದ ಸ್ಥಳಗಳು ಬೇಕು .ಗ್ರಾಹಕರ ಈ ಎಲ್ಲಾ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಜೀವನಶೈಲಿ-ಸ್ಥಾನಮಾನವನ್ನು ಹೆಚ್ಚಿಸುವಂತೆ ಇನ್‌ಲ್ಯಾಂಡ್ ಬಿಸಿನೆಸ್ ಪಾರ್ಕ್ ಕಟ್ಟಡವನ್ನು ವಿನ್ಯಾಸಗೊಳಿಸ ಲಾಗಿದೆ. ಎನ್‌ಆರ್‌ಐ ಮತ್ತು ಇತರ ಹೂಡಿಕೆದಾರರಿಗೆ ಇನ್ ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಒಂದು ಆದರ್ಶ ಹೂಡಿಕೆಯ ಅವಕಾಶವಾಗಿದೆ ಎಂದರು.ಇನ್‌ಲ್ಯಾಂಡ್ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾತ್ರ ಬಳಸುತ್ತದೆ ಮತ್ತು ಉತ್ತಮ ಗುಣಮಟ್ಟದ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಹೆಚ್ಚು ನುರಿತ ಇಂಜಿನಿಯ‌ರ್ಗಳ ತಂಡವನ್ನು ಬಳಸಿಕೊಳ್ಳುತ್ತದೆ. ನಮ್ಮ ವ್ಯವಹಾರಗಳಲ್ಲಿ ಮುಕ್ತ ಮತ್ತು ಪ್ರಾಮಾಣಿಕ ವಿಧಾನವು ಸಾವಿರಾರು ಗ್ರಾಹಕರ ಹೃದಯ ಮತ್ತು ನಿಷ್ಠೆಯನ್ನು ಗೆದ್ದಿದೆ. ಭವಿಷ್ಯದಲ್ಲೂ ನೀವು ಇನ್ ಲ್ಯಾಂಡ್ ಬ್ಯಾಂಡ್ ನೊಂದಿಗೆ ಇನ್ನೂ ಅನೇಕ ನವೀನ ಮತ್ತು ಸುಂದರವಾಗಿ ವಿನ್ಯಾಸಗೊಳಿಸಿದ ಕಟ್ಟಡಗಳನ್ನು ಮಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿಯೂ ಕಾಣಬಹುದು ಎಂದವರು ತಿಳಿಸಿದ್ದಾರೆ.
*’ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್’:-
ನಗರದ ಪ್ರಮುಖ ಸ್ಥಳದಲ್ಲಿ, ಅಸಂಖ್ಯಾತ ದೊಡ್ಡ ವ್ಯಾಪಾರ ಸಂಸ್ಥೆಗಳಿಗೆ ಸಮೀಪದಲ್ಲಿರುವ ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಮಂಗಳೂರಿನ ಐಕಾನಿಕ್ ವಾಣಿಜ್ಯ . ಕೇಂದ್ರವಾಗಿ ಬೆಳೆಯಲಿದೆ.ಅಮೂಲ್ಯ ಆಭರಣಗಳು, ಖ್ಯಾತ ಬ್ರ್ಯಾಂಡ್ ನ ಶೋರೂಂಗಳಿಗೆ, ಬಹು ರಾಷ್ಟ್ರೀಯ ಕಂಪೆನಿಗಳ ಕಚೇರಿಗಳು, ಕ್ಲಿನಿಕ್ ಮತ್ತು ಪ್ರಮುಖ ವೈದ್ಯರಿಗೆ ರೋಗನಿರ್ಣಯ ಕೇಂದ್ರಗಳು, ಬ್ಯಾಂಕ್ ಶಾಖೆಗಳು, ಆರೋಗ್ಯ, ಫಿಟ್ನೆಸ್ ಮತ್ತು ತರಬೇತಿ ಕೇಂದ್ರಗಳು, ಮೆಗಾ@ ಬ್ರಾಂಡ್ ಆಹಾರ ಸರಪಳಿಗಳು ಮತ್ತು ಇತರ ಹೊಸ-ಯುಗದ ವ್ಯಾಪಾರ ವಹಿವಾಟು ವ್ಯವಹಾರ ಗಳನ್ನು ನಡೆಸಲು ಯೋಗ್ಯ ಸ್ಥಳವಾಗಿದೆ.ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಅತ್ಯುನ್ನತ ಗುಣಮಟ್ಟದ ಮತ್ತು ಆಧುನಿಕ ದರ್ಜೆಯ 65 ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿದೆ. ಕಟ್ಟಡದಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳಗಳು ಮತ್ತು ಶೇ.100ರಷ್ಟು ಡಿಜಿ ಬ್ಯಾಕ್ ಅಪ್ ನೊಂದಿಗೆ ವರ್ಧಿತ ವಿದ್ಯುತ್ ಒದಗಿಸಲಾಗಿದೆ. 24 ಗಂಟೆಗಳ ಸಿಸಿಟಿವಿ ಆಧಾರಿತ ಭದ್ರತೆ, ನೂತನ ಅಗ್ನಿಶಾಮಕ ವ್ಯವಸ್ಥೆ, ಗ್ರಾನೈಟ್ ನೆಲಹಾಸು ಹೊಂದಿರುವ ವಿಶಾಲವಾದ ಕಾರಿಡಾರ್‌ಗಳು ಮತ್ತು ಸ್ವಯಂಚಾಲಿತ ರಕ್ಷಣಾ ಸಾಧನದೊಂದಿಗೆ ಎರಡು ಸ್ವಯಂಚಾಲಿತ ಎಲಿವೇಟರ್ ಗಳು ಸೌಕರ್ಯಗಳಿವೆ. ವಿಶಾಲವಾದ ಇಟಾಲಿಯನ್ ಮಾರ್ಬಲ್ ಲಾಬಿ, ಇದು ಮಂಗಳೂರಿನಲ್ಲಿ ಮೊದಲನೆಯದು, ಇದು ಕಟ್ಟಡದ ಭವ್ಯ ನೋಟವನ್ನು ಹಚ್ಚಿಸುತ್ತದೆ. ಲಾಬಿಯು ಕಲಾತ್ಮಕ ಕೆಫೆಯನ್ನು ಸಹ ಹೊಂದಿದೆ. ಇದು ಕಟ್ಟಡದ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ ಸಂಸ್ಥೆಯ ಪ್ರತಿನಿಧಿ ಉಲ್ಲಾಸ್ ಕದ್ರಿ ವಿವರಿಸಿದ್ದಾರೆ.
ಹಿರಿಯ ಪತ್ರಕರ್ತ ವಿ.ಯು.ಜಾರ್ಜ್ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರಿಗೆ ಅತಿಥಿಗಳ ಮೂಲಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇನ್ ಲ್ಯಾಂಡ್ ಬಿಲ್ಡರ್ ಸಮೂಹ ಸಂಸ್ಥೆ ಗಳ ನಿರ್ದೇಶಕ ವಹಾಜ್ ಯೂಸುಫ್ ಸ್ವಾಗತಿಸಿದರು. ನಿರ್ದೇಶಕ ಮೆರಾಜ್ ಯೂಸುಫ್ ವಾದಿಸಿದರು. ರೋಶಲ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles