18.6 C
Karnataka
Saturday, November 23, 2024

ಫಾದರ್ ಮುಲ್ಲರ್ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜು, ಆಸ್ಪತ್ರೆ -ವಿಶ್ವ ಹೋಮಿಯೋಪತಿ ದಿನಾಚರಣೆ

ಮ೦ಗಳೂರು: ಹೋಮಿಯೋಪತಿಯನ್ನು ವೈಜ್ಞಾನಿಕ ವಿಚಾರಗಳೊಂದಿಗೆ ಜನರಿಗೆ ಪ್ರಸ್ತುತಪಡಿಸುವಲ್ಲಿ ಫಾದರ್ ಮುಲ್ಲರ್ ಸಂಸ್ಥೆ ಯಶಸ್ವಿ ಹೆಜ್ಜೆಯನ್ನಿಟ್ಟಿದ್ದು,ವಿದ್ಯಾರ್ಥೀಗಳು ಪ್ರಸ್ತುತತೆಯನ್ನು ಅಳವಡಿಸಿ ಅಧ್ಯಯನದೊಂದಿಗೆ ಸಂಶೋಧನೆ ನಡೆಸುವ ಮನೋಭಾವ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಸಿಎಜಿ ಇಂಡಿಯಾದ ಸೀನಿಯರ್ ಅಕೌಂಟೆಂಟ್ ಜನರಲ್ ಡಾ. ರಾಹುಲ್ ಪಿ. ಹೇಳಿದರು.
ಹೋಮಿಯೋಪತಿ ಜನಕ ಡಾ. ಸ್ಯಾಮುವೆಲ್ ಹಾನ್ನಿಮನ್ 269ನೇ ಜನ್ಮದಿನದ ಸ್ಮರಣಾರ್ಥ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಮಂಗಳವಾರ ಜರಗಿದ ವಿಶ್ವ ಹೋಮಿಯೋಪತಿ ದಿನ -2024 ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ .ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಹೋಮಿಯೋಪತಿ ಸಂಸ್ಥೆಯಲ್ಲಿ ಅಧ್ಯಯನನಡೆಸಿದವರು ವಿವಿಧ ಕ್ಷೇತ್ರಗಳಲ್ಲಿ ಇದ್ದರೂ ಯಶಸ್ಸಿನ ಹಾದಿಯಲ್ಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕೇರಳ ಸರಕಾರದ ಹೋಮಿಯೋಪತಿ ವಿಭಾಗದ ವೈದ್ಯಕೀಯ ಅಧಿಕಾರಿ ಡಾ ಜೆರಾಲ್ಡ್‌ ಜಯಕುಮಾರ್ ಮತ್ತು ಡಾ ಬಿನುರಾಜ್ ಟಿ.ಕೆ. ಜತೆಗೂಡಿ ಹೊರತಂದ ಹೋಮಿಯೋ ಎವಿಡೆನ್ಸ್‌ ಡಾಟ್‌ಕಾಂ ಎ೦ಬ ಡಿಜಿಟಲ್‌ ಡಟಾಬೇಸ್ ವೆಬ್‌ಸೈಟ್‌ಗೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಫಾ. ರೋಷನ್ ಕ್ರಾಸ್ತಾ ಬಿಡುಗಡೆಗೊಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles