ಮ೦ಗಳೂರು: ಪ್ರಜ್ವಲ್ ರೇವಣ್ಣ ಅವರ ವೀಡಿಯೋ ಎನ್ನಲಾದ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡುವಲ್ಲಿ ರಾಜ್ಯ ಸರ್ಕಾರ ಹಾಗೂ ಎಸ್ಐ ಟಿ ಸಂಪೂರ್ಣ ವಿಫಲವಾಗಿದ್ದು ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎ೦ದು ದ.ಕ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮುಖ್ಯಮ೦ತ್ರಿಯವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಎಸ್ ಐ ಟಿ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ವಿಡಿಯೋ ಪ್ರಜ್ವಲ್ ರೇವಣ್ಣದ್ದೆ ಆಗಿದ್ದಲ್ಲಿ ಶಿಕ್ಷೆಯಾಗಲಿ.ಪ್ರಜ್ವಲ್ ರೇವಣ್ಣ ಪಾತ್ರದಷ್ಟೇ ವಿಡಿಯೋ ಹರಿಯಬಿಟ್ಟವರ ಪಾತ್ರವೂ ಇದೆ. ಯಾರು ಹರಿ ಬಿಟ್ಟಿದ್ದಾರೋ ಅವರ ವಿರುದ್ಧ ಕಠಿಣ ಕ್ರಮವಾಗಬೇಕು .ಎಸ್ ಐ ಟಿ ಒಂದು ಭಾಗದ ವಿಚಾರಣೆ ಮಾತ್ರ ಮಾಡಿದ್ದಾರೆ .ಯಾರು ಹಂಚಿಕೆ ವೈರಲ್ ಮಾಡುತ್ತಿದ್ದರೋ ಅವರನ್ನ ವಿಚಾರಣೆ ಮಾಡುತ್ತಿಲ್ಲ ಎ೦ದು ದ.ಕ ಯುವ ಜೆಡಿಎಸ್ಮ ನವಿಯಲ್ಲಿ ಹೇಳಿದೆ.
.ಯುವ ಜನತಾದಳ (ಜಾ) ದ.ಕ ಜಿಲ್ಲೆ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗು ಜಿಲ್ಲಾ ಸಂಘಟನಾ ಉಸ್ತುವಾರಿಯಾದ ರತೀಶ್ ಕರ್ಕೇರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಮೊಹಮ್ಮದ್ ಅಸಿಫ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು, ಹಾಗು ಯುವ ಪಧಾದಿಕಾರಿಗಳಾದ ನಿತೇಶ್ ಪೂಜಾರಿ, ವಿನಿತ್, ರಿನಿತ್, ನಿಶಾಂತ್, ಜಯದೀಪ್ ,ಧನುಷ್ ಪೂಜಾರಿ,ಸುಮಂತ್ ಬಂಟ್ವಾಳ್, ಕಾರ್ತಿಕ, ಸುಶಾಂತ್, ವಿಕ್ಯಾತ್ ಮುಂತಾದವರು ಪಾಲ್ಗೊಂಡಿದ್ದರು.