ಮಂಗಳೂರು; ಶ್ರೀ ನಾರಾಯಣ ಸಾಂಸ್ಕರಿಕ ವೇದಿಯ ನೂತನ ಕಚೇರಿ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯ ನಾಮ್ಕೊ ಸೆಂಟರ್ ನ ಮೂರನೇ ಮಹಡಿಯಲ್ಲಿ ಮೇ 12ರ೦ದು ಉದ್ಘಾಟನೆಗೊಳ್ಳಲಿದೆ ಎ೦ದು ಅಧ್ಯಕ್ಷ ಅನಿಲ್ ದಾಮೋದರನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ನಾಡಿನಾದ್ಯಂತ ಸಾರುವ ಹಾಗೂ ಸೇವಾ ಮನೋಭಾವದೊಂದಿಗೆ ಶ್ರೀ ನಾರಾಯಣ ಸಾಂಸ್ಕರಿಕ ವೇದಿ (ರಿ) ಸಂಸ್ಥೆಯು ಮಂಗಳೂರಿನಲ್ಲಿ ಸುಮಾರು 13 ವರ್ಷಗಳ ಹಿಂದೆ ಸ್ಥಾಪನೆ ಗೊಂಡಿತು. ಮಲೆಯಾಳಿಗಳಿಗೆ ಇದೊಂದು ಮಾಹಿತಿ ಕೇಂದ್ರವಾಗಿ ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ಹಲವಾರು ವಿಚಾರದಲ್ಲಿ ಮಾರ್ಗದರ್ಶನ ನೀಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡ ರೋಗಿಗಳಿಗೆ ಸಹಾಯಧನ , ನೆರೆಪರಿಹಾರ ಸೇರಿದಂತೆ ಸುಮಾರು 25 ಲಕ್ಷ ರೂ. ಧನ ಸಹಾಯ ನೀಡಿರುತ್ತದೆ ಎ೦ದರು.
ಶ್ರೀ ನಾರಾಯಣ ಸಾಂಸ್ಕರಿಕ ವೇದಿ ಸದ್ಯ ಬಾಡಿಗೆ ಕಚೇರಿಯಲ್ಲಿ ಸೇವೆಯನ್ನು ನೀಡುತ್ತಿತ್ತು, ಇದೀಗ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯ ನಾಮ್ಕೊ ಸೆಂಟರ್ ನ ಮೂರನೇ ಮಹಡಿಯಲ್ಲಿ ವಿಶಾಲವಾದ ನೂತನ ಕಚೇರಿಯನ್ನು ತೆರೆಯಲ್ಲಿದ್ದುಕೇರಳ ವರ್ಕಳದ ಶಿವಗಿರಿ ಮಠದ ಶ್ರೀ ಸ್ವಾಮಿ ಅಸಂಗಾನಂದ ಗಿರಿ ಅವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಇಡುಕ್ಕಿಯ ಖ್ಯಾತ ವಾಗ್ಮಿ ಡಾ.ಸನಲ್ ಕುಮಾರ್ ಅವರು ಗುರು ಸಂದೇಶ ನೀಡಲಿದ್ದಾರೆ.ಶಾಸಕ ವೇದವ್ಯಾಸ ಕಾಮತ್, ಕೇರಳ ಸಮಾಜದ ಅಧ್ಯಕ್ಷ ಟಿ.ಕೆ.ರಾಜನ್, ಮುಡಾ ಅಧ್ಯಕ್ಷ ಸದಾಶಿವ ಉಲ್ಲಾಳ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ರವಿಶಂಕರ್ ಮಿಜಾರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎ೦ದವರು ಹೇಳಿದರು.
ಶ್ರೀ ನಾರಾಯಣ ಸಾಂಸ್ಕರಿಕ ವೇದಿಯ ಪ್ರದೀಪ್ ಕುಮಾರ್, ಮೋಹನ್, ಸುರೇಶ್ ಎ೦.ಎಸ್. ಉಪಸ್ಥಿತರಿದ್ದರು.