ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ರೈಲ್ ಸೌಧದ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು. ಕರ್ತವ್ಯದಲ್ಲಿ ಸಮಯ ಪ್ರಜ್ಞೆ ತೋರಿ ಸಂಭವನೀಯ ಅಪಘಾತಗಳನ್ನು ತಪ್ಪಿಸಿದ ವಿವಿಧ ಇಲಾಖೆಗಳ ಉದ್ಯೋಗಿಗಳಿಗೆ ಈ ಮಹತ್ವದ ಸಭೆಯ ನಂತರ ಸುರಕ್ಷತಾ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಪ್ರಶಸ್ತಿ ಪುರಸ್ಕೃತರು
ಬೋರೇಗೌಡ ಆರ್, ಕೀಮ್ಯಾನ್/ಕುಣಿಗಲ್. ಶೇಖರ್ ಎಲ್ ಲಮಾಣಿ, ಗ್ಯಾಂಗ್ ಮೇಟ್ /ಕುಲೆಮ್, ಶೈಲೇಂದ್ರ ಕುಮಾರ್, ಲೋಕೋ ಪೈಲಟ್, ಜಿತೇಂದ್ರ ಜಂಗಿದ್, ಸಹಾಯಕ ಲೋಕೋ ಪೈಲಟ್, ಎಂ ಎಸ್ ಲಕ್ಷ್ಮೀಶ, ಲೋಕೋ ಪೈಲಟ್, ಮುತೀವುಲ್ಲಾ ಖಾನ್, ಲೋಕೋ ಪೈಲಟ್/ಮೈಸೂರು, ಕೆ ಶಿವಕುಮಾರ್, ಟೆಕ್ನಿಷಿಯನ್/ಹರಿಹರ, ಲಕ್ಷ್ಮಪ್ಪ ಎಸ್ ಎಲಿಗಾರ್, ಟೆಕ್ನಿಷಿಯನ್ ಹರಿಹರ,ಜೆ. ಮಹಮ್ಮದ್ ಸಾಧಿಕ್, ಕಿರಿಯ ಎಂಜಿನಿಯರ್/ ಹರಿಹರ, ವಿರೂಪಾಕ್ಷಯ್ಯ, ಕೀಮ್ಯಾನ್ / ನಿಡ್ವಂಡ, ಪವನ್ ಕುಮಾರ್, ಟೆಕ್ನಿಷಿಯನ್-II/ ಕ್ಯಾಸಲ್ ರಾಕ್ ಅವರನ್ನುಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.