ಮಂಗಳೂರು: ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ನ (ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ
ಘಟಕ )ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷ ವಿಭಾಗವು, ಮಂಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ: ಸೂಲಗಿತ್ತಿಯರ ದಿನಾಚರಣೆ ದಿನಾಚರಣೆಯನ್ನು ಸಂಸ್ಥೆಯ ದಶವಾರ್ಷಿಕ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿತ್ತು.
ಮಂಗಳೂರಿನ ಜಿಲ್ಲಾ ಆರೋಗ್ಯಧಿಕಾರಿ. ಡಾ ಎಚ್ ಆರ್ ತಿಮ್ಮಯ್ಯ ಅವರು ಸಮಾಜಕ್ಕೆ ಸೂಲಗಿತ್ತಿಯರ ಮತ್ತು ಆಶಾ ಕಾರ್ಯಕರ್ತೆಯರ ಅಮೂಲ್ಯ ಕೊಡುಗೆಗಳ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ಕು ವೆಲ್ಲ್ಯೊ ಅವರು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಅಗತ್ಯದ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದಾರೆ ಎ೦ದರು.
ಆಶಾ ಕಾರ್ಯಕರ್ತೆ ದಮಯಂತಿ ಎನ್, ಅವರನ್ನು . ಮಹಿಳೆಯರು ಮತ್ತು ಮಕ್ಕಳಿಗಾಗಿಸಲ್ಲಿಸಿದ ಸಮರ್ಪಿತ ಸೇವೆಗಾಗಿ ಸನ್ಮಾನಿಸಲಾಯಿತು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿತ್ತಿರುವ ಡಾ .ದೀಪಾ ಕಣಗಲ್ ಅವರು ಪ್ರಸ್ತಾವನೆಗೈದರು.ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ
ರಮ್ಯಶ್ರೀ ಎಸ್, ಸ್ವಾಗತಿಸಿದರು. ಕ್ಲೆರಿಟ ಲೋಬೊ ವ೦ದಿಸಿದರು.