ಮ೦ಗಳೂರು: ಮೈಸೂರು ವಿಭಾಗದ ಉಡುಪಿ, ಶಿವಮೊಗ್ಗ, ಚಿಕ್ಕ ಮಂಗಳೂರು, ಮಡಿಕೇರಿ, ಮಂಡ್ಯ, ಹಾಸನ, ಚಾಮರಾಜ ನಗರ ಹಾಗೂ ಮಂಗಳೂರಿನ ಪಿಂಚಣಿದಾರರಿಗೆ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಖಜಾನೆ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ಪಿಂಚಣಿ ಅದಾಲತ್ ಸಭೆ ಹಮ್ಮಿಕೊಳ್ಳಲಾಯಿತು.
ಬೆಂಗಳೂರಿನ ಮಹಾಲೇಖಪಾಲರ ಕಚೇರಿಯ ಡಿ.ಐ.ಜಿ ಹಾಗೂ ಬೆಂಗಳೂರಿನ ಪಿಂಚಣಿ ಪಾವತಿ ಬಟವಾಡೆಯ ಹೆಚ್ಚುವರಿ ನಿರ್ದೇಶಕರಾದ ಯಶೋದ ಅವರು ವಿಡಿಯೋ ಸಂವಾದದಲ್ಲಿ ಸಮಸ್ಯೆಗಳನ್ನು ಆಲಿಸಿ ಬೆಂಗಳೂರಿನ ಮಹಾಲೇಖಪಾಲರ ಕಚೇರಿಯಿಂದ ಮೈಸೂರು ವಿಭಾಗದ ಪಿಂಚಣಿದಾರರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಎಂ.ಎಸ್, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ ಎಂ.ಪಿ, ಪಿಂಚಣಿ ವಿಭಾಗದ ಪ್ರಭಾಕರ್ ಜಾದವ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕುಗಳ ಮ್ಯಾನೇಜರುಗಳು ಹಾಗೂ ಪಿಂಚಣಿ ಸಂಘಗಳ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದರು.