ಮಂಗಳೂರು: ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಕೆನರಾ ನಂದಗೋಕುಲ ಶಾಲೆಯ ಹೊಸ ಶಾಖೆಯು ಮೇ 22 ರಂದು ಪದವಿನಂಗಡಿಯಲ್ಲಿ ಉದ್ಘಾಟನೆಗೊಂಡಿತು.
ಸಂಸ್ಥೆಯ ಅಧ್ಯಕ್ಷರಾದ ಡಿ ವಾಸುದೇವ ಕಾಮತ್ ಹೊಸ ಶಾಖೆಯನ್ನು ಉದ್ಘಾಟಿಸಿ ಗೌರವ ಸ್ವೀಕರಿಸಿ ಮಾತನಾಡುತ್ತಾ”ಈ ಹೊಸ ಶಾಖೆ ನಮ್ಮ ಶೈಕ್ಷಣಿಕ ಜಾಲಕ್ಕೆ ಹೊಸ ಸೇರ್ಪಡೆ ಮಾತ್ರವಲ್ಲ ಮಂಗಳೂರು ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಪೋಷಕ ಪರಿಸರವನ್ನು ಒದಗಿಸಲು ಬದ್ಧತೆಯನ್ನು ಭವಿಷ್ಯವನ್ನು ಭರವಸೆ ಮತ್ತು ಶೈಕ್ಷಣಿಕ ಸಾಮರ್ಥ್ಯದಿಂದ ರೂಪಿಸಲು ಈ ಸಂಸ್ಥೆಗೆ ಸಮುದಾಯವನ್ನು ಸ್ವಾಗತಿಸುತ್ತಾ ಪ್ರತಿಯೊಂದು ಮಕ್ಕಳಿಗೆ ಅವರ ಶೈಕ್ಷಣಿಕ ಪ್ರಯಾಣದಲ್ಲಿ ಉತ್ತಮ ಪ್ರಾರಂಭವನ್ನು ಖಚಿತ ಪಡಿಸುತ್ತದೆ ಎಂದು ಹೇಳಿದರು.
ಮಧ್ಯಾಹ್ನ 3 ಗಂಟೆಗೆ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಲವಾರು ಸ್ಪರ್ಧೆಗಳೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಸ್ಪರ್ಧಿಗಳು ಆಕರ್ಷಕ ರೇಖಾಚಿತ್ರ, ನೃತ್ಯ ಮತ್ತು ಮಣ್ಣಿನ ಮಾದರಿಗಳನ್ನು ಪ್ರದರ್ಶಿಸಿದರು. ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ. ರಂಗನಾಥ ಭಟ್, ಉಪಾಧ್ಯಕ್ಷ ಕೆ.ಸುರೇಶ್ ಕಾಮತ್, ಕೆನರಾ ನಂದಗೋಕುಲ್ ಶಾಲೆಯ ಸಂಚಾಲಕ ನರೇಶ್ ಶೆಣೈ, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ ನ್ಯಾಷನಲ್ ಶಾಲೆಯ ಡೈರೆಕ್ಟರ್ ಅಂಜನಾ ಕಾಮತ್, ಸಂಸ್ಥೆಯ ಸದಸ್ಯರಾದ ಟಿ.ಗೋಪಾಲ ಕೃಷ್ಣ ಶೆಣೈ, ಎಂ. ವಾಮನ್ ಕಾಮತ್, ಕೆ. ಶಿವಾನಂದ ಶೆಣೈ, ರಾಘವೇಂದ್ರ ಕುಡ್ವ, ಅಶ್ವಿನಿ ಕಾಮತ್, ಡಿ. ವಿಕ್ರಮ್ ಪೈ,ಸಂಸ್ಥೆಯ ಪಿ.ಆರ್.ಒ ಉಜ್ವಲ ರಾವ್, ಮತ್ತು ಆಡಳಿತಾಧಿಕಾರಿ ದೀಪ್ತಿ ನಾಯಕ್, ಸಮನ್ವಯಕಾರರಾದ ವಂದನಾ ಮತ್ತು ಪೂರ್ಣಿಮಾ ಎಚ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.