20.3 C
Karnataka
Saturday, November 16, 2024

ಮೇ 25 ಮತ್ತು 26: ವಾಹನ ಸಂಚಾರ ಪರ್ಯಾಯ ವ್ಯವಸ್ಥೆ

ಮ೦ಗಳೂರು: ಮೇ 25 ಮತ್ತು 26 ರಂದು ರಾಜ್ಯಪಾಲರು, ಮುಖ್ಯಮಂತ್ರಿ ಯವರು ಹಾಗೂ ಹಲವಾರು ಪ್ರಮುಖ ವಿವಿಐಪಿಗಳು ಮಂಗಳೂರು ನಗರಕ್ಕೆ ಆಗಮಿಸಿ, ನಗರದ ಎಂ.ಜಿ ರಸ್ತೆಯಲ್ಲಿನ ಟಿ.ಎಂ.ಎ.ಪೈ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಸದ್ರಿ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ನವಭಾರತ ಸರ್ಕಲ್‌ನಿಂದ ಪಿವಿಎಸ್ ಮುಖಾಂತರ ಲೇಡಿಹಿಲ್ ಸರ್ಕಲ್ ಕಡೆಗೆ ಹೋಗುವ ಎಂ.ಜಿ ರಸ್ತೆಯಲ್ಲಿನ ಎಲ್ಲಾ ಮೀಡಿಯನ್‌ಗಳನ್ನು ಮುಚ್ಚಬೇಕಾಗುತ್ತದೆ. (ಬೆಸೆಂಟ್ ಜಂಕ್ಷನ್, ಕೋಡಿಯಾಲ್‌ಗುತ್ತು ಕ್ರಾಸ್, ಬಲ್ಲಾಳ್‌ಬಾಗ್ ಜಂಕ್ಷನ್, ನೆಹರೂ ಅವೆನ್ಯೂ ಜಂಕ್ಷನ್). ಆದ ಕಾರಣ ಸದ್ರಿ ರಸ್ತೆಯನ್ನು ಉಪಯೋಗಿಸುವ ಎಲ್ಲಾ ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ ಎ೦ದು ನಗರ ಪೊಲೀಸ್‌ ಆಯುಕ್ತರ ಪ್ರಕಟನೆ ತಿಳಿಸಿದೆ.

*ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿರುವ ಸ್ಥಳಗಳು *
ಕೊಟ್ಟಾರ ಚೌಕಿ, ಕುಂಟಿಕಾನ, ಕೆ.ಪಿ.ಟಿ, ನಂತೂರು, ಕೆ.ಎಸ್.ಆರ್.ಟಿ.ಸಿ., ಬಂಟ್ಸ್ ಹಾಸ್ಟೆಲ್, ಡಾ. ಅಂಬೇಡ್ಕರ್ ಸರ್ಕಲ್, ಹಾರ್ಟಿಕಲ್ಚರ್ ಜಂಕ್ಷನ್, ಬಲ್ಮಠ, ಹಂಪನಕಟ್ಟೆ, ಕರಾವಳಿ ಸರ್ಕಲ್, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು.

ಮಂಗಳೂರು ನಗರದಲ್ಲಿ ಮಾಡಲಾಗಿರುವ ಸಂಚಾರ ಪರ್ಯಾಯ ವ್ಯವಸ್ಥೆ

  1. ಹಂಪನಕಟ್ಟೆಯಿಂದ ಬಂಟ್ಸ್ ಹಾಸ್ಟೆಲ್ ಮುಖಾಂತರ ಲೇಡಿಹಿಲ್‌ಗೆ ಹೋಗುವ ಎಲ್ಲಾ ವಾಹನಗಳು ಕರಂಗಲಪಾಡಿ ಅಥವಾ ಭಾರತ್‌ಬೀಡಿ ಜಂಕ್ಷನ್ ಮುಖಾಂತರ ಚಲಿಸುವುದು.
  2. ಪಿ.ವಿ.ಎಸ್ ಜಂಕ್ಷನ್‌ನಿಂದ ಲೇಡಿಹಿಲ್ ಸರ್ಕಲ್‌ವರೆಗಿನ ಎಂ.ಜಿ. ರಸ್ತೆಗೆ ಬಂದು ಸೇರುವ ಎಲ್ಲಾ ಕೂಡು ರಸ್ತೆಗಳನ್ನು ಉಪಯೋಗಿಸುವ ವಾಹನ ಸವಾರರು ಬಿಜೈ ಚರ್ಚ್ ರೋಡ್ / ಕುದ್ರೋಳಿ ರಸ್ತೆಯನ್ನು ಉಪಯೋಗಿಸುವುದು.

ಬಸ್ಸುಗಳ ಸಂಚಾರಕ್ಕೆ ನಿಗದಿಪಡಿಸಿದ ರಸ್ತೆಗಳು:

  1. ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ, ಬಂಟ್ಸ್ ಹಾಸ್ಟೆಲ್ ಮುಖಾಂತರ ಸಂಚರಿಸುವ ಎಲ್ಲಾ ಸಿಟಿ ಬಸ್ಸುಗಳು, ಎಕ್ಸ್‌ಪ್ರೆಸ್ ಬಸ್ಸುಗಳು ಹಾಗೂ KSRTC ಬಸ್ಸುಗಳು ಹಂಪನಕಟ್ಟ, ಡಾ.ಅಂಬೇಡ್ಕರ್ ವೃತ್ತ, ಬಲ್ಮಠ, ಹಾರ್ಟಿಕಲ್ಚರ್ ಜಂಕ್ಷನ್, ಕದ್ರಿ ಜಂಕ್ಷನ್, ನಂತೂರು ಮುಖಾಂತರ ಸಂಚರಿಸಲು ಸೂಚಿಸಿದೆ.
  2. ಕೊಟ್ಟಾರಚೌಕಿ ಮುಖಾಂತರ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ಸಿಟಿ ಬಸ್ಸುಗಳು, ಎಕ್ಸ್‌ಪ್ರೆಸ್ ಬಸ್ಸುಗಳು ಹಾಗೂ KSRTC ಬಸ್ಸುಗಳು ನಂತೂರು ಮುಖಾಂತರ ಸಂಚರಿಸಲು ಸೂಚಿಸಿದೆ.
  3. KSRTC ಬಸ್ಸ್ ನಿಲ್ದಾಣದಿಂದ ಹೊರಹೋಗುವ ಹಾಗೂ ಒಳಬರುವ ಎಲ್ಲಾ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯ ಕುಂಟಿಕಾನ ಜಂಕ್ಷನ್ ಮೂಲಕ ಒಳ ಬರಲು ಹಾಗೂ ಹೊರ ಹೋಗಲು ಸೂಚಿಸಿದೆ.
  • ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು*
    ಪಿ.ವಿ.ಎಸ್ ಜಂಕ್ಷನ್‌ನಿಂದ ಲಾಲ್‌ಭಾಗ್ ಜಂಕ್ಷನ್‌ವರೆಗಿನ ಎಂ.ಜಿ ರಸ್ತೆಯಲ್ಲಿ, PVS ಜಂಕ್ಷನ್ ನಿಂದ ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ವರೆಗೆ ಹಾಗೂ ಲಾಲ್‌ಬಾಗ್ ಜಂಕ್ಷನ್‌ನಿಂದ ಕೆ.ಪಿ.ಟಿ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles