19.4 C
Karnataka
Monday, November 18, 2024

ಕೆನರಾ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಖಾನ್ ಮೆಚ್ಚುಗೆ

ಮ೦ಗಳೂರು: ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿತವಾದ ಕೆನರಾ ಶಿಕ್ಷಣ ಸಂಸ್ಥೆ, 133 ವರ್ಷಗಳ ಇತಿಹಾಸದಲ್ಲಿ ಶಿಕ್ಷಣಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದು, ಲಕ್ಷಾಂತರ ನಾಗರಿಕರ ಉಜ್ವಲ ಬದುಕಿಗೆ ಕಾರಣೀಕರ್ತರಾಗಿರುವ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಕೊಡುಗೆ ಸ್ಮರಣೀಯವಾದದು ಎಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯಪಟ್ಟರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ್ ಕಾಮತ್ ಹಾಗೂ ಆಡಳಿತ ಮಂಡಳಿಯ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈಯವರು ಮಂಗಳೂರಿನಲ್ಲಿ ಸೋಮವಾರ ಕೇರಳ ರಾಜ್ಯಪಾಲರನ್ನು ಭೇಟಿಯಾಗಿ ಕೆನರಾ ಇಂಜಿನಿಯರಿಗ್ ಕಾಲೇಜು ಮುಂದಿನ ವರ್ಷ ಬೆಳ್ಳಿಹಬ್ಬವನ್ನು ಆಚರಿಸಲಿದ್ದು, ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಕೋರಿದರು. ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಕೆನರಾ ಶಿಕ್ಷಣ ಸಂಸ್ಥೆಗಳ ಸಮಗ್ರ ಬೆಳವಣಿಗೆಗಳ ಬಗ್ಗೆ ತಮ್ಮ ಆಡಳಿತ ಮಂಡಳಿ ಕೈಗೊಂಡ ಸುಧಾರಣಾ ಕ್ರಮಗಳು, ಆಗಿರುವ ಅಭಿವೃದ್ಧಿ, ಫಲಿತಾಂಶದಲ್ಲಿ ಅದ್ಭುತ ಪ್ರಗತಿ, ಏರುತ್ತಿರುವ ವಿದ್ಯಾರ್ಥಿ ಸಮುದಾಯದ ಸಂಖ್ಯೆ, ಹೊಸ ಕೋರ್ಸುಗಳ ಅಳವಡಿಕೆ, ಇಂಟರ್ ನ್ಯಾಶನಲ್ ಸ್ಕೂಲ್ ಆರಂಭ, ಶಿಕ್ಷಕ ವೃಂದದ ಮಾದರಿ ಪ್ರಯತ್ನಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡ ರಾಜ್ಯಪಾಲ ಅರಿಫ್ ಖಾನ್ ಅವರು ಇಂತಹ ಶ್ರೇಷ್ಟ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸುವುದಾಗಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles