ಮಂಗಳೂರು: ನೀಟ್ ಪರೀಕ್ಷೆಯ ಅವ್ಯವಹಾರ ಖಂಡಿಸಿ ದ.ಕ. ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಶನಿವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ಎನ್.ಎಸ್.ಯು ಉಪಾಧ್ಯಕ್ಷ ಫಾರೂಕ್ ಬಾಯಬೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಅತ್ಯಂತ ಗಂಭೀರ ಹಗರಣವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ಎನ್.ಟಿ.ಎ ಅವ್ಯವಸ್ಥೆಯಿಂದ ವೈದ್ಯಕೀಯ ಶಿಕ್ಷಣ ಸಂಸ್ಥೆಯ ದಾಖಲಾತಿಗಾಗಿ ನಿರೀಕ್ಷೆಯಲ್ಲಿರುವ ಲಕ್ಷಾಂತರ ಬಡ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇಂತಹ ಗಂಭೀರ ಪ್ರಕರಣ ಮರುಕಲಿಸದಂತೆ ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೆಟ್ ಸದಸ್ಯ ಸವಾದ್ ಸುಳ್ಯ, ಜಿಲ್ಲಾ ಎನ್.ಎಸ್.ಯು.ಐ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ, ಮಂಗಳೂರು ದಕ್ಷಿಣ ಸಮಿತಿ ಅಧ್ಯಕ್ಷಕ್ರಿಸ್ತನ್ ಮಿನೇಜಸ್, ಬಂಟ್ವಾಳ ಸಮಿತಿ ಅಧ್ಯಕ್ಷ ಸಫ್ವಾನ್ ಸರವು, ಪ್ರಮುಖರಾದ ಸಫ್ವಾನ್ ಕುದ್ರೋಳಿ, ಸುಖಾವಿಂದರ್ ಸಿಂಗ್, ವಿಶಾಲ್ ಪೂಜಾರಿ, ಸುಮನ್ ಶೆಟ್ಟಿ, ಮುಅಮೀನ್ ಕೆಂಪಿ, ಹರ್ಷನ್ ಭಟ್ ಉಪಸ್ಥಿತರಿದ್ದರು.