17.9 C
Karnataka
Saturday, November 23, 2024

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ: ಆನ್‍ಲೈನ್ ಮೂಲಕ ಬುಕ್ಕಿಂಗ್ ಜಾರಿ

ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಅತಿಹೆಚ್ಚಿನ ಚಾರಣಿಗರ ಒತ್ತಡ ಇರುವುದರಿಂದ, ಎರಡು ಚಾರಣಗಳಿಗೆ ಚಾರಣ ಕುರಿತು ಅವಕಾಶ ನೀಡಲು ಸಾಗಿಸುವ ಸಾಮಥ್ರ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗಿದ್ದು ಗರಿಷ್ಠ 300 ಜನರಿಗೆ ಕಾರಣಕ್ಕೆ ಅವಕಾಶ ನೀಡಲಾಗುತ್ತದೆ.

ಚಾರಣ ಕೈಗೊಳ್ಳಲು www.kudremukhanationalpark.in ಮುಖಾಂತರ ಬುಕ್ಕಿಂಗ್ ಮಾಡಬೇಕು, ಒಬ್ಬ ವ್ಯಕ್ತಿಯು ಗರಿಷ್ಠ ಮೂರು ಜನರಿಗೆ ಬುಕ್ಕಿಂಗ್ ಮಾಡಬಹುದು. ಎಲ್ಲಾ ಚಾರಣಿಗರು ಆನ್‍ಲೈನ್ ಮೂಲಕ ಮಾತ್ರ ಬುಕ್ಕಿಂಗ್ ಮಾಡಬೇಕು, ಯಾವುದೇ ಆಫ್‍ಲೈನ್ ಬುಕ್ಕಿಂಗ್ ಅವಕಾಶ ಇರುವುದಿಲ್ಲ. ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ 200 ಜನರಿಗೆ ಅವಕಾಶ ನೀಡಲಾಗುತ್ತದೆ.

ವಾರಾಂತ್ಯಕ್ಕೆ ಸ್ಥಳೀಯ ಗ್ರಾಮಸ್ಥರಿಗೆ ಅವಕಾಶ ಲಭಿಸದ ಕಾರಣ ವಿಶೇಷವಾಗಿ ಅವಕಾಶ ನೀಡಲು 50 ಸ್ಥಳೀಯ ಗ್ರಾಮಸ್ಥರಿಗೆ ಪ್ರತ್ಯೇಕ ಆನ್‍ಲೈನ್ ಬುಕಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಕುದುರೆಮುಖ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ವನ್ಯಜೀವಿ ವಲಯ ಸಂಪರ್ಕಿಸಿ ಬುಕ್ಕಿಂಗ್ ಲಾಗಿನ್ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದು. 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ವಾರಂತ್ಯಕ್ಕೆ ಮಾತ್ರ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ತತ್ಕಾಲ್ ಬುಕ್ಕಿಂಗ್ ವ್ಯವಸ್ಥೆಯನ್ನು ತಂತ್ರಾಂಶದಲ್ಲಿ ರೂಪಿಸಲಾಗಿದ್ದು ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಕುರಿತು ಪ್ರತಿ ಗುರುವಾರ ಮಧ್ಯಾಹ್ನ ಆನ್‍ಲೈನ್‍ನಲ್ಲಿ ಅವಕಾಶ ನೀಡಲಾಗಿದೆ. ಉಳಿದ ದಿನಗಳಿಗೆ 300 ಜನರಿಗೆ ಬುಕ್ಕಿಂಗ್ ಅವಕಾಶ ನೀಡಲಾಗಿದೆ. ಚಾರಣ ಕುರಿತು ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್‍ಲೈನ್ ತಂತ್ರಾಂಶದಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಜೂನ್ 25ರಿಂದ ಈ ವ್ಯವಸ್ಥೆಯು ಜಾರಿಗೆ ಬರಲಿದೆ.

ಸ್ಥಳಿಯ ಹೋಂ ಸ್ಟೇ ಮಾಲೀಕರು ಕುದುರೆಮುಖ ವನ್ಯಜೀವಿ ವಲಯ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಇವರಲ್ಲಿ ಹೋಂ ಸ್ಟೇ ಕುರಿತ ದಾಖಲಾತಿಗಳನ್ನು ನೀಡಿ ಕಡ್ಡಾಯವಾಗಿ ಜೂನ್ ತಿಂಗಳ ಅಂತ್ಯದ ಒಳಗೆ ನೋಂದಾಯಿಸಿಕೊಳ್ಳಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles