34.2 C
Karnataka
Saturday, April 19, 2025

ಟೆನಿಸ್ ಆಟಗಾರ ಸುಮಿತ್ ನಾಗಲ್ – ಬ್ಯಾಂಕ್ ಆಫ್ ಬರೋಡಾದ ರಾಯಭಾರಿ

ಮ೦ಗಳೂರು: ಬ್ಯಾಂಕ್ ಆಫ್ ಬರೋಡಾ ಉದಯೋನ್ಮುಖ ಭಾರತೀಯ ಟೆನಿಸ್ ಆಟಗಾರ ಸುಮಿತ್ ನಾಗಲ್ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಮಾಡಿಕೊಂಡಿದೆ ಎಂದು ಘೋಷಿಸಿದೆ.


ಪ್ರತಿಭಾನ್ವಿತ ಭಾರತೀಯ ಕ್ರೀಡಾಪಟುಗಳನ್ನು ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿಯೇ ಬೆಂಬಲಿಸುವ ಬ್ಯಾಂಕಿನ ದೀರ್ಘಕಾಲದ
ಸಂಪ್ರದಾಯವಾಗಿದೆ. ಭಾರತದ ಅಗ್ರ ಶ್ರೇಯಾಂಕದ ಏಕ ಟೆನಿಸ್ ಆಟಗಾರರಾಗಿರುವ ಸುಮಿತ್ ಇವರ ರಾಯಭಾರಿಯಿಂದ, ಹೊಸ ಪೀಳಿಗೆಯ ಉತ್ಪನ್ನಗಳೊಂದಿಗೆ ತನ್ನಗ್ರಾಹಕರನ್ನು ವಿಸ್ತರಿಸುವುದು ಬ್ಯಾಂಕಿನ ಗುರಿಯಾಗಿದೆ.
26 ವರ್ಷ ವಯಸ್ಸಿನ ಸುಮಿತ್ ಈಗಾಗಲೇ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಇತ್ತೀಚೆಗೆ ವೃತ್ತಿಜೀವನದ ಉನ್ನತ ವಿಶ್ವ ಶ್ರೇಯಾಂಕದಲ್ಲಿ 71 ನೇ ಸ್ಥಾನಕ್ಕೆ ಏರಿದರು ಮತ್ತುಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಜನವರಿಯಲ್ಲಿ, ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿಶ್ರೇಯಾಂಕದ ಆಟಗಾರನನ್ನು ಸೋಲಿಸಿದ 35 ವರ್ಷಗಳಲ್ಲಿ ಮೊದಲ ಭಾರತೀಯಆಟಗಾರರಾದರು. ಸುಮಿತ್ ಅವರು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಕ್ರಿಕೆಟ್
ಯುವ ಐಕಾನ್ ಶೆಫಾಲಿ ವರ್ಮಾ ಅವರನ್ನು ಒಳಗೊಂಡಿರುವ ಬ್ಯಾಂಕ್ ಆಫ್ ಬರೋಡಾ ಎಂಡೋಸರ್‌ಗಳ ಪ್ರಭಾವಶಾಲಿ ಶ್ರೇಣಿಯನ್ನು ಸೇರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles