27.5 C
Karnataka
Monday, April 21, 2025

ಉಚಿತ ಯಕ್ಷಗಾನ ತರಬೇತಿ ಅಭಿಯಾನ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ವತಿಯಿಂದ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವನ್ನು ಮುಳ್ಳಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿದರು.
ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ಪಟಗಾರ ಅಧ್ಯಕ್ಷತೆ ವಹಿಸಿದ್ದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರ ಉಪಸ್ಥಿಸಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ವೆಂಕಟೇಶ್ ಪಟಗಾರ ಅವರನ್ನು ಗೌರವಿಸಲಾಯಿತು.
ಮುಳ್ಳಕಾಡು ಶಾಲಾ ಮುಖ್ಯ ಶಿಕ್ಷಕ ಜಿ ಉಸ್ಮಾನ್ ಸ್ವಾಗತಿಸಿದರು. ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಪ್ರಸ್ತಾವನೆಗೈದರು. ಕಾರ್ಪೋರೇಟರ್ ಗಾಯತ್ರಿ ಎ ರಾವ್, ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಹರಿಣಾಕ್ಷಿ ,ಪ್ರಾಥಮಿಕ ಶಾಲಾ ಎಸ್ಡ್ ಎಂಸಿ ಅಧ್ಯಕ್ಷ ಮಲ್ಲಪ್ಪ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಕೋಶಧಿಕಾರಿ ಸಿ ಎ ಸುಧೇಶ್ ರೈ, ಪಟ್ಲ ಪೌಂಡೇಶನ್ ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿ ಎ ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಗೋಪಿನಾಥ್ ಶೆಟ್ಟಿ, ಮುಳ್ಳಕಾಡು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ವೇಣುಗೋಪಾಲ್, ಘಟಕದ ಟ್ರಸ್ಟಿಗಳಾದ ಜಯಶೀಲ ಅಡ್ಯಾಂತಾಯ, ಶ್ರೀಮತಿ ಅನಿತಾ ಪಿಂಟೋ, ಜೆ ವಿ ಶೆಟ್ಟಿ. ಸಂತೋಷ್ ಶೆಟ್ಟಿ ,ಮಹೇಶ್ ಕದ್ರಿ, ಮತ್ತು ಇತರರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶಶಿಕಲಾ ಕೆ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಹಿಲ್ಡಾ ಕ್ಲಿಮೆನ್ಸೇನಿಯಾ ಪಿಂಟೋ ವಂದಿಸಿದರು. ಯಕ್ಷಶಿಕ್ಷಣದ ತರಬೇತುದಾರ ರಾಕೇಶ್ ರೈ ಅಡ್ಕ ತರಬೇತಿಗೆ ಚಾಲನೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles