24.6 C
Karnataka
Monday, November 18, 2024

ವಾಮಂಜೂರ್ ನಲ್ಲಿ ಅರೋಗ್ಯ ತಪಾಸಣಾ ಶಿಬಿರ

ಮ೦ಗಳೂರು: ವಾಮಂಜೂರಿನ ಆರ್. ಜಿ ಫೌಂಡೇಶನ್ ನೇತೃತ್ವದಲ್ಲಿ ಸಂವೇದನಾ ಮಹಿಳಾ ಸಮಿತಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ವೈಟ್ ಗ್ರೋ ಎಲ್.ಎಲ್ ಪಿ ಸಹಭಾಗಿತ್ವದಲ್ಲಿ ವಾಮಂಜೂರು ಪರಿಸರದ ಸರ್ವ ನಾಗರಿಕರ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಜೂ. 30ರಂದು ನೆರವೇರಿತು.

ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ವಾಮಂಜೂರು ಚರ್ಚ್ ಧರ್ಮಗುರು ಫಾ. ಜೇಮ್ಸ್ ಡಿಸೋಜ, ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲಿಯಾನ್, ಆರ್ ಜಿ ಫೌಂಡೇಶನ್ ಅಧ್ಯಕ್ಷ ಎಂ ಜಿ ಹೆಗ್ಡೆ ಇತರ ಗಣ್ಯರು ಸೇರಿ ದೀಪಬೆಳಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಶಕ್ತ ಮಗುವಿಗೆ ವೀಲ್ ಚೇರ್ ವಿತರಣೆಯನ್ನು ಮಾಡಲಾಯಿತು.
ವಾಮಂಜೂರು ಇಸಾಹುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಟಿ ಇಬ್ರಾಹಿಂ, ವಾಮಂಜೂರು ,ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಶೆಟ್ಟಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ವೈಟ್ ಗ್ರೋ ಇಂಡಸ್ಟ್ರೀ ಪಾಲುದಾರರಾದ ಗ್ಲಾಡಿ ಆಳ್ವರೀಸ್, ಫಿಲೊಮಿನಾ ಲೋಬೊ, ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ರೈ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಾರಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಜಿ‌ ಫೌಂಡೇಶನ್ ಅಧ್ಯಕ್ಷ ಎಂ ಜಿ ಹೆಗಡೆ, ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ, ಸಹಕರಿಸಿದವರಿಗೆ ಕೃತಜ್ಞತೆಯನ್ನು ತಿಳಿಸಿದರು.ಸಂವೇದನಾ ಮಹಿಳಾ ಸಮಿತಿ ಅಧ್ಯಕ್ಷೆ ಮರಿಯಾ ಕುಟಿನ್ಹಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಯೋಜಕಿ ಬಬಿತಾ ನಿರೂಪಣೆ ಮಾಡಿದರು. ರೋಷನ್ ಅವರು ವಂದನಾರ್ಪಣೆ ಮಾಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles