ಮ೦ಗಳೂರು: ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯ ವತಿಯಿ೦ದ ವಿವಿಧ ಧರ್ಮಗಳ 316 ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿವೇತನಗಳನ್ನು ವಿತರಿಸಲಾಯಿತು.
ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಶತಮಾನ ಸಭಾಂಗಣದಲ್ಲಿ ನಡೆದ ಕಾಯ೯ಕ್ರಮದಲ್ಲಿ ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಡಾ| ಪೀಟರ್ ಪೌಲ್ ಸಲ್ದಾನ ಮತ್ತು ಖ್ಯಾತ ಉದ್ಯಮಿ ಮೈಕಲ್ ಡಿಸೋಜಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾಸ್ಕ್ ಶತಮಾನದ ಟ್ರಸ್ಟ್‌ನ ನಿರ್ವಾಹಕ ಟ್ರಸ್ಟಿ ಕ್ಯಾಪ್ಟನ್ ವಿನ್ಸೆಂಟ್ ಪಾಯ್ಸ್ ಅವರು ಸ್ವಾಗತಿಸಿದರು.ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ಸಂಯೋಜಕ ಉಲ್ಲಾಸ್ ರಾಸ್ಕಿನ್ಹಾ ಅವರು ವಿದ್ಯಾರ್ಥಿವೇತನ ವಿತರಣೆಯ ಮಾನದಂಡಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಅ| ವಂ| ಡಾ| ಪೀಟರ್ ಪೌಲ್ ಸಲ್ದಾನ ಅವರು ವಿದ್ಯಾರ್ಥಿವೇತನಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಸಿಎಸ್‌ಕೆ ಶತಮಾನದ ಟ್ರಸ್ಟ್ ಮತ್ತು ಸಿಎಸ್‌ಕೆ’ಯ ಕಾರ್ಯದರ್ಶಿ ಆನಂದ ಪಿರೇರಾ ಅವರು. ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಮತ್ತು ಯಶಸ್ವಿಗೊಳಿಸಲು ತಮ್ಮ ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ನೀಡಿದ ಎಲ್ಲರಿಗೂ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.