26.3 C
Karnataka
Saturday, November 23, 2024

ವಿದ್ವತ್ ಸ್ಪೂರ್ತಿ ಸಂಚಿಕೆ ಮೊದಲನೇ ಭಾಗ ಅನಾವರಣ

ಮ೦ಗಳೂರು: ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರುದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಠಿಯಿಂದ ವಿದ್ವತ್ ಪಿಯು ಕಾಲೇಜಿನಲ್ಲಿ ಓರಿಯಂಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

” ವಿದ್ವತ್ ಸ್ಫೂರ್ತಿ ಸಂಚಿಕೆ ಯ ( Motivational Edition) ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನ ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ಅವರು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ *ಸ್ಫರ್ಧಾತ್ಮಕ ಪರೀಕ್ಷೆಗೆ ಓದುವ ವಿಧಾನ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ಕೆಲವು ವೈಜ್ಞಾನಿಕ ಸಲಹೆಗಳನ್ನೊಳಗೊಂಡಿದ್ದಲ್ಲದೇ, ಪಿಯು ಹಂತದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ವಿಸ್ತೃತ ಮಾಹಿತಿ, ಮಕ್ಕಳು ಸಾಧನೆ ಮಾಡುವ ಇಚ್ಛೆ ಇರುವವರು ಸಮಯವನ್ನ ಹೇಗೆ ಉಪಯೋಗಿಸಿಕೊಳ್ಳಬೇಕು, ಪ್ರತಿದಿನದ ದಿನಚರಿ ಹೇಗಿರಬೇಕು, ಬೇಸಿಕ್ಸ್ ಗಳನ್ನ ಹೇಗೆ ವರ್ಕ್ ಮಾಡಿಕೊಳ್ಳಬೇಕು, ಮನೆಯ ಕಷ್ಟದ ಪರಿಸ್ಥಿತಿಯನ್ನ ಹೇಗೆ ತೆಗೆದುಕೊಳ್ಳಬೇಕು, ಕೊರತೆಯನ್ನೇ ಹೇಗೆ ಮೆಟ್ಟಿನಿಲ್ಲಬೇಕು, ಪೋಷಕರ ಆಸೆಗಳೇನಾಗಿರುತ್ತವೆ ಹಾಗೂ ಅವುಗಳನ್ನ ಹೇಗೆ ಗಂಭೀರವಾಗಿ ಪರಿಗಣಿಸಬೇಕು ಎಂಬಿತ್ಯಾದಿ ಸೂಕ್ಷ್ಮಗಳನ್ನ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ವಿದ್ವತ್ ಪಿಯು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ: ಪ್ರತಾಪ್ ದೊಡ್ಡಮನಿಯವರು ವಿದ್ವತ್ ಕಾಲೇಜಿನ ಪರೀಕ್ಷಾ ಮಾದರಿ, ಕೌನ್ಸಲಿಂಗ್ ಮಾದರಿ ಹಾಗೂ ಸಾಧಕ ಮಾದರಿಯ ಸಮಗ್ರ ಮಾಹಿತಿ ನೀಡಿದರು.

ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ಸುಭಾಶ್ವಂದ್ರ ಶೆಟ್ಟಿಯವರು ವಿದ್ವತ್ ಪ್ರತಿಷ್ಠಾನದ ಭವಿಷ್ಯದ ಕನಸನ್ನು ವ್ಯಕ್ತ ಪಡಿಸಿ, ಮಹತ್ವದ ಪಿಯು ಶಿಕ್ಷಣಕ್ಕೆ ವಿದ್ವತ್ ಕರ್ನಾಟಕದ ಮಹತ್ವಾಕಾಂಕ್ಷಿ ಮಕ್ಕಳಿಗೆ ಹೇಗೆ ವೇದಿಕೆಯಾಗಲಿದೆ ಎಂದರು.

ಪ್ರಾಂಶುಪಾಲ ಜಯೇಂದ್ರ ಬಂದ್ಯಾ ನ್ ವಿದ್ವತ್ ಡಿಜಿಟಲ್ ಪ್ಲಾಟ್ ಫಾರಂ “ವಿದ್ವತ್ ಯುಟಿಲಿಟಿ ಆ್ಯಪ್” ನ್ನ ಪರಿಚಯಿಸಿದರು.. ವಿದ್ವತ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಪ್ರಜ್ವಲ್ ರೈ ಹಾಗೂ ಖಜಾಂಚಿ ಎಮ್. ಕೆ ಕಾಶೀನಾಥ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles