ಮಂಗಳೂರು: ಸರ್ಕಾರಿ ಶಿಕ್ಷಣ ಸಂಸ್ಥೆಯಾದ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಡಿಪ್ಲೋಮಾ ಕೋರ್ಸುಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಪ್ರಥಮ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸಂಬಂಧ ಪಟ್ಟ ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಮೆಷಿನ್ ಲನಿರ್ಂಗ್ ಕೋರ್ಸ್ ಪ್ರಾರಂಭಿಸಿದ್ದು, ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‍ಗೆ ಸಂಬಂಧಪಟ್ಟ ಕೋರ್ಸ್‍ಗಳಾದ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ ಮತ್ತುಡಿಪ್ಲೋಮಾ ಇನ್ ಫಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸಿಗೆ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ನೇರವಾಗಿ ಕಾಲೇಜಿನ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.
ಎಲ್ಲಾ ಕೋರ್ಸುಗಳು ಶೇ. 100 ಉದ್ಯೋಗ ಆಧಾರಿತವಾಗಿದ್ದು, ಕೋರ್ಸ್ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಉನ್ನತ ಕಂಪೆÀನಿಯಲ್ಲಿ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಸಹಾಯ ಮಾಡಲಾಗುತ್ತದೆ. ಕೊನೆಯ ಒಂದು ವರ್ಷದ ಇಂಟರ್ನ್‍ಶಿಪ್ ಅವಧಿಯಲ್ಲಿ ಪ್ರತಿ ತಿಂಗಳು ಸುಮಾರು ರೂ. 15,000 ದಿಂದ ರೂ. 20,000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಎಸ್.ಎಸ್.ಎಲ್.ಸಿ ಪಾಸಾದ ಅಥವಾ ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸುಗಳಿಗೆ ದಾಖಲಾಗಬಹುದು.
ಹೆಚ್ಚಿನ ಮಾಹಿತಿಗೆ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಫ್ಲ್ಯಾಟ್ ನಂ, 7ಇ, ಕೈಗಾರಿಕಾ ವಲಯ ಮುಖ್ಯರಸ್ತೆ, ಬೈಕಂಪಾಡಿ ಮಂಗಳೂರು. ಮೊಬೈಲ್ ಸಂಖ್ಯೆ 8073208137, 9008263660, 9481265587, 9741667257, 9483920114 ದೂರವಾಣಿ ಸಂಖ್ಯೆ 0824 2408003 ಸಂಪರ್ಕಿಸುವಂತೆ ಜಿ.ಟಿ.ಟಿ.ಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.