26.8 C
Karnataka
Sunday, November 17, 2024

ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ಐ.ಎಸ್.ಒ.ಮಾನ್ಯತೆ

ಮಂಗಳೂರು: ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪ್ರಾಯೋಜಿತ ಬೆಂಜನ ಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ಐ.ಎಸ್.ಒ. 9001:2015 ಮತ್ತು ಐ.ಎಸ್.ಒ.21001: 2018 ಪ್ರಮಾಣಪತ್ರದ ಮಾನ್ಯತೆ ಲಭಿಸಿದೆ.

ಕಾಲೇಜಿನ ಮೂರುಕೋರ್ಸುಗಳಿಗೆ 2022 ರಲ್ಲಿ ಎನ್.ಬಿ.ಎ ಮಾನ್ಯತೆ ,2023ರಲ್ಲಿ ನ್ಯಾಕ್ ಎಕ್ರೆಡಿಟೇಶನ್ ನಲ್ಲಿ ಎ ಗ್ರೇಡ್ ಮಾನ್ಯತೆ ಬಳಿಕ ಇದೀಗ ಕಾಲೇಜು ಮತ್ತೊಂದು ಮಹತ್ವದ ಸಾಧನೆ ದಾಖಲಿಸಿ ದಂತಾಗಿದೆ. ಈ ಮೂಲಕಸಂಸ್ಥೆಯ ಉನ್ನತ ಮಟ್ಟದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳಿಗೆ ಗೌರವ ದೊರೆತಂತಾಗಿದೆ. ಇದೀಗ ಈ ಭಾಗದಲ್ಲಿ ಐ.ಎಸ್.ಒ. ಮಾನ್ಯತೆ ಪಡೆದ ಮೊದಲ ಇಂಜಿನಿಯರಿಂಗ್ ಕಾಲೇಜು ಎನ್ನುವ ಹಿರಿಮೆಗೆ ಕೆನರಾ ಇಂಜಿನಿಯರಿಂಗ್ ಕಾಲೇಜು ಪಾತ್ರವಾಗಿದೆ.
ಈ ಮಾನ್ಯತೆವಿದ್ಯಾರ್ಥಿ ಕೇಂದ್ರಿತ ಗುಣಮಟ್ಟದ ಬೋಧನಾ ಕ್ರಮದಲ್ಲಿ ಕಾಲೇಜು ಹೊಂದಿರುವ ಬದ್ಧತೆಯನ್ನು ಗುರುತಿಸಿದೆ. ಈ ಮೂಲಕ ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ . ಇಂಟರ್ನ್ಯಾಷನಲ್ ಎಕ್ರೆಡಿಟೇಶನ್ ಟ್ರೆಡಿಶನ್ ಸರ್ವೀಸ್ (ಐ.ಎ.ಎಸ್.)ಮಾನ್ಯತೆ ಪಡೆದ ಗ್ಲೋಬಲ್ ಎಂ.ಸಿ.ಎಸ್ ಲಿಮಿಟೆಡ್ ಸಂಸ್ಥೆಯು ಪ್ರಮಾಣಪತ್ರವನ್ನು ನೀಡುತ್ತಿದ್ದು ಇದಕ್ಕೆ ಪೂರ್ವಭಾವಿಯಾಗಿ ಕಾಲೇಜನ್ನು ಸಂದರ್ಶಿಸಿ ಸಮಗ್ರ ಪರಿಶೀಲನೆ ಮತ್ತು ಅವಲೋಕನವನ್ನು ನಡೆಸಿದೆ.

ಕೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles