ಮ೦ಗಳೂರು: ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಕ್ಕಲ್ ವಿವೇಕಾನಂದ ನಗರ ಎಂಬಲ್ಲಿ ಜು. 6. ರಂದು ನಡೆದಿದ್ದ ಮನೆಕಳ್ಳತನ ಪ್ರಕರಣದ ಆರೋಪಿಗಳನ್ನು ಬ೦ಧಿಸಲಾಗಿದೆ. ಕಳವು ಮಾಡಿದ ಸುಮಾರು 4,64,750/- ರೂ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಆರೋಪಿಗಳಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ವೆಂಕಟೇಶ್ @ ವೆಂಕಿ( 21 ವರ್ಷ),ಸಾಗರ್, (21 ವರ್ಷ),ರಂಜಿತ್, (20 ವರ್ಷ) ಬ೦ಧಿತ ಆರೋಪಿಗಳು.ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕು ಗಂಗೌಡನಹಳ್ಳಿ ಎಂಬಲ್ಲಿ ಬ೦ಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪ್ರಕರಣದಲ್ಲಿ ಪೊಲೀಸ್ ಆಯುಕ್ತ ಅನುಪಮ ಅಗರ್ ವಾಲ್ ಅವರ ಆದೇಶದಂತೆ ಪೊಲೀಸ್ ಉಪ ಪೊಲೀಸ್ ಆಯುಕ್ತರವರುಗಳಾದ ಸಿದ್ದಾರ್ಥ ಗೋಯಲ್, ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನ ಮತ್ತು ಸಹಾಯ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ತೋರಟ್ ರವರ ಮಾರ್ಗದಶನದಂತೆ ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕಿ ಭಾರತಿ ನೇತೃತ್ವದ ಹರೀಶ್ ಹೆಚ್ ವಿ, ಪಿಎಸ್ಐ, ಅನಿತಾ ಹೆಚ್.ಬಿ, ಪಿ.ಎಸ್.ಐ, ವಿನಯ್ ಕುಮಾರ್ ಎಎಸ್ಐ, ಮತ್ತು ಸಿಬ್ಬಂದಿಗಳಾದ ಪುಷ್ಟರಾಜ್, ರಾಮಚಂದ್ರ, ಸತೀಶ್ ಹೆಚ್.ಕೆ, ಪ್ರಮೋದ್.ಕೆ, ವೆಂಕಟೇಶ್, ಅಭಿಷೇಕ್, ಬಾಸ್ಕರ್, ಯಲ್ಲಾಲಿಂಗ, ಮಮತಾ, ಚಂದ್ರಹಾಸ್, ಶರತ್ ಹಾಗೂ ಮಂಗಳುರು ನಗರ ಗಣಕಯಂತ್ರ ವಿಭಾಗದ ಸಿಬ್ಬಂದಿ ಮನೋಜ್ ರವರನ್ನೊಳಗೊಂಡ ತಂಡವು ಆರೋಪಿಗಳ ಬ೦ಧನ ಹಾಗೂ ಸ್ವತ್ತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.