22.6 C
Karnataka
Monday, November 18, 2024

ಕಾಣೆಯಾಗಿದ್ದ ಪ್ರವೀಣ್ ನನ್ನು ಹೆತ್ತವರ ಮಡಿಲು ಸೇರಿಸಿದ ಸ್ನೇಹಾಲಯ

ಮ೦ಗಳೂರು: ಹತ್ತು ವರ್ಷದ ಹಿಂದೆ ಕಾಣೆಯಾಗಿದ್ದ ಪ್ರವೀಣ್ ಪುನಃ ಹೆತ್ತವರ ಮಡಿಲು ಸೇರಿದ ಘಟನೆ ಮಂಜೇಶ್ವರದ ಸ್ನೇಹಾಲಯದಲ್ಲಿ ಜು. 20 ರಂದು ನಡೆಯಿತು.
.ಮಂಗಳೂರಿನ ಅತ್ತಾವರದ ಕೆ.ಎಮ್.ಸಿ ಆಸ್ಪತ್ರೆಯ ಬಳಿಯಿಂದ ಸ್ನೇಹಾಲಯದ ಸಹೋದರ ಜೋಸೆಫ್ ಕ್ರಾಸ್ತಾರಾವರು 2018ರ ಸೆ.7 ರಂದು ಪ್ರವೀಣನನ್ನು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಿದ್ದರು.ಕಳೆದ ಕೆಲವು ವರ್ಷಗಳಿಂದ ಆತ ಸ್ನೇಹಾಲಯದಲ್ಲಿ ಎಲ್ಲರ ಪ್ರೀತಿಪಾತ್ರನಾಗಿದ್ದ, ಆತನ ನಿಜ ಹೆಸರು ತಿಳಿಯದ ಕಾರಣ ಆತನಿಗೆ ಪ್ರೀತಿಯಿಂದ ‘ಧೂಮ’ಎಂಬ ಹೆಸರನ್ನು ಇಡಲಾಗಿತ್ತು. ಇನ್ನೊಂದೆಡೆ ಆತನ ಕುಟುಂಬ ಆತನನ್ನು ಹುಡುಕಾಡದ ಸ್ಥಳಗಳಿಲ್ಲ. ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು ಯಾವುದೇ ಫಲ ಸಿಗಲಿಲ್ಲ.ಈ ನಡುವೆ ಆತನನ್ನು ಹುಡುಕಾಡಲು ಕುಟುಂಬ ಪಟ್ಟ ಪ್ರಯತ್ನ ಒಂದೆರಡಲ್ಲ.

ವಿಳಾಸ ಪತ್ತೆಹಚ್ಚಲು ಸಹಕರಿಸಿದ ಆಧಾರ್ ಕಾರ್ಡ್:
ಸಾಮಾನ್ಯವಾಗಿ ಆಧಾರ್ ಕಾರ್ಡ್ ಮಾಡುವಾಗ ಬಯೊಮೆಟ್ರಿಕ್ ತಂತ್ರಜ್ನಾನವನ್ನು ಉಪಯೋಗಿಸಿ ವ್ಯಕ್ತಿಯ ಮಾಹಿತಿಯನ್ನು ಶೇಖರಿಸಿಡುದು ಎಲ್ಲರಿಗೆ ತಿಳಿದ ಸಂಗತಿ.ಆದರೆ ಇದೇ ತಂತ್ರಜ್ನಾನ ಒರ್ವ ವ್ಯಕ್ತಿಯನ್ನು ಇಷ್ಟು ವರ್ಷದ ಬಳಿಕ ಕುಟುಂಬ ಸೇರಿಸುವುದು ಪ್ರಶಂಸನೀಯ. ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದ ನಿವಾಸಿಗಳಿಗೆ ಆಧಾರ್ ಶಿಬಿರವನ್ನು ಏರ್ಪಡಿಸಲಾಗಿತ್ತು, ಮತ್ತು ಇದರ ಫಲವಾಗಿ ಸುಮಾರು 36 ನಿವಾಸಿಗಳ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು.ಪ್ರವೀಣನ ವಿಳಾಸ ಸಿಕ್ಕಿದ ತಕ್ಷಣ ಸ್ನೇಹಾಲಯದ ಸಮಾಜ ಕಾರ್ಯ ವಿಭಾಗದ ಸಿಬ್ಬಂಧಿಗಳು ಆತನ ಕುಟುಂಬವನ್ನು ಸಂಪರ್ಕಿಸಿ ಈ ಸುದ್ದಿಯನ್ನು ತಿಳಿಸಿದರು.
ಜು. 20 ರಂದು ಆತನ ಕುಟುಂಬಿಕರು ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿದರು.ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ಸಿಬ್ಬಂದಿಗಳ ಸಮ್ಮುಖದಲ್ಲಿ ಪುನರ್ಮಿಲನ ಕಾರ್ಯ ನಡೆಯಿತು.ಆತನ ತಮ್ಮ ಮತ್ತು ತಂದೆ ನೀಡಿದ ಹೇಳಿಕೆಯ ಪ್ರಕಾರ ಆತ ಕಳೆದ ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ಕೆಲಸಕ್ಕೆಂದ ತೆರಳಿದಾಗ ಆತ ಹೇಳದೆ ನಾಪತ್ತೆಯಾಗಿದ್ದ ಈ ದುಖಃದಲ್ಲಿದ್ದ ಆತನ ತಾಯಿ ಮೂರು ವರ್ಷಗಳ ಹಿಂದೆ ಸ್ವರ್ಗಸ್ಥರಾಗಿದ್ದರು.ಈ ಕಾರ್ಯಕ್ಕೆ ಸಹಕರಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬಿಕರು ಕೃತಜ್ನತೆಗಳನ್ನು ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles