ಮಂಗಳೂರು: ಕೆನರಾ ನಂದಗೋಕುಲ್ ತಂಡವು ಶ್ರೀ ಭುವನೇಂದ್ರ ಸಭಾಭವನದಲ್ಲಿ ಹುಲಿಯ ದಿನವನ್ನು ವಿಜೃಂಭಣೆಯಿಂದ ಆಚರಿಸಿತು. ಮಕ್ಕಳು ಹುಲಿವೇಷ ಧರಿಸಿ ಎಲ್ಲರ ಗಮನ ಸೆಳೆದರು. ಕೆಲವು ಮಕ್ಕಳು ಹುಲಿಗಳ ಬಗ್ಗೆ ಭಾವನಾತ್ಮಕ ಭಾಷಣಗಳನ್ನು ನೀಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ “ಹುಲಿಗಳನ್ನು ರಕ್ಷಿಸಿ, ಪ್ರಕೃತಿಯನ್ನು ಉಳಿಸಿ” ಎಂಬ ಘೋಷಣೆ ಕೇಳಿಬಂತು. ಪುಣ್ಯಕೋಟಿ ಎಂಬ ಪ್ರಸಿದ್ಧ ನಾಟಕವನ್ನು ಮಕ್ಕಳು ಅಭಿನಯ ಮಾಡಿದರು. ಹೆಮ್ಮೆಯ ಹುಲಿ ನೃತ್ಯ ಪ್ರದರ್ಶನವು ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆ ಆಗಿತ್ತು.
ಈ ಕಾರ್ಯಕ್ರಮದಲ್ಲಿ ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ನಿರ್ದೇಶಕಿ ಅಂಜನಾ ಕಾಮತ್, ಸಂಯೋಜಕಿ ವಂದನಾ, ಮತ್ತು ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.