18 C
Karnataka
Sunday, November 24, 2024

ಮಾನವೀಯತೆ ಮೆರೆದ ಬಸ್ ಸಿಬ್ಬಂದಿಗೆ ಅಭಿನಂದನೆ

ಮಂಗಳೂರು : ಬಸ್ ಸಿಬ್ಬಂದಿ ಮಾನವೀಯ ಸೇವೆಗಳಿಗೆ ಇತಿಹಾಸವಿದೆ. ಗ್ರಾಮಾಂತರ ಭಾಗದಲ್ಲಿ ವಿಷದ ಹಾವು ಕಚ್ಚಿದ ರೋಗಿಯನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಚರಿತ್ರೆಯಿದೆ. ಸಿಬ್ಬಂದಿಯ ಮಾನವೀಯ ಸೇವೆಗೆ ಸಾರ್ವಜನಿಕವಾಗಿ ಸಿಕ್ಕಿರುವ ಪ್ರೋತ್ಸಾಹ ಪ್ರಶಂಸನೀಯ. ಸಿಬ್ಬಂದಿ ಮೆರೆದ ಮಾನವೀಯ ಸೇವೆ ಎಲ್ಲರಿಗೂ ಮಾದರಿ ಎಂದು ದ.ಕ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಹೇಳಿದರು‌.

ಅವರು ದ.ಕ ಬಸ್ಸು ಮಾಲಕರ ಸಂಘ ಮಂಗಳೂರು‌ ಇವರ ಹಂಪನಕಟ್ಟೆ ಕಚೇರಿಯ ಪಿ.ಭಾಸ್ಕರ್ ಸಾಲಿಯಾನ್ ವೇದಿಕೆಯಲ್ಲಿ ಬಸ್ಸಿನಲ್ಲಿ ಎದೆ ನೋವಿಗೆ ಒಳಗಾಗಿ ಅಸ್ವಸ್ಥಳಾದ ವಿದ್ಯಾರ್ಥಿ ನಿಯನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮಂಗಳಾದೇವಿಯಿಂದ ಕುಂಜತ್ತಬೈಲ್ ಚಲಿಸುವ 13 ಎಫ್ ಕ್ರಷ್ಣ ಪ್ರಸಾದ್ ಟ್ರಾವೆಲ್ಸ್ ಚಾಲಕ ಗಜೇಂದ್ರ ಕುಂದರ್ ನಿರ್ವಾಹಕರುಗಳಾದ ಸುರೇಶ್, ಮಹೇಶ್ ಎಂಬವರನ್ನು ಅಭಿನಂದಿಸಿ ಮಾತನಾಡಿದರು.

ಬಸ್ ಸಿಬ್ಬಂದಿ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿರುವುದು ಇದು ಮೊದಲಲ್ಲ. ಪ್ರತಿಯೊಂದು ಅಪಘಾತಗಳ ಸಂದರ್ಭದಲ್ಲಿಯೂ ಗಾಯಾಳುಗಳ ಆಸ್ಪತ್ರೆಗೆ ದಾಖಲಿಸುವುದು, ರಸ್ತೆ ಹೊಂಡಗಳ ಸರಿಮಾಡಿಕೊಂಡು, ಮರ ಕಡಿದು ಟ್ರಿಪ್ ಮಾಡಿದ ಇತಿಹಾಸವಿದೆ. ಬಸ್ಸುಗಳು ತೆರಳಿದ ನಂತರವೇ ವಾಹನಗಳು ತೆರಳಿದ ವಿಚಾರಗಳಿವೆ.1985 ರಲ್ಲಿ ವಿಷಹಾವು ಕಚ್ಚಿದ ರೋಗಿಯನ್ನು ಮಂಜನಾಡಿ ಸಮೀಪ ವಜ್ರೇಶ್ವರಿ ಬಸ್ ಮೂಲಕ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳು, ಮಾಧ್ಯಮಗಳು ಕಡಿಮೆಯಿದ್ದುದರಿಂದ ಸೇವೆಗಳು ಬೆಳಕಿಗೆ ಬಂದಿರಲಿಲ್ಲ. ಇದೀಗ ನಿತ್ಯ ಬೈಯ್ಯುವ ಮಾಧ್ಯಮಗಳ, ಜನರ ಸಹಕಾರದಿಂದ ಸಿಬ್ಬಂದಿ ಸೇವೆ ಗೌರವಕ್ಕೆ ಪಾತ್ರವಾಗಿದೆ. ಪತ್ರಕರ್ತರುಬೆಳ್ತಂಗಡಿ, ಪುತ್ತೂರು, ಕಡಬ, ಸೋಮಂತ್ತಡ್ಕ ಭಾಗಗಳಲ್ಲಿ ಬಸ್ ಗಳಿಲ್ಲದ ಕುರಿತು ಬೇಡಿಕೆಯಿರಿಸಿದ್ದು, ಶೀಘ್ರವೇ ಅದನ್ನು ಸರಿಪಡಿಸುತ್ತೇವೆ ಎಂದರು.

ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಮಾತನಾಡಿ, ಮಂಗಳೂರು ಖಾಸಗಿ ಬಸ್ ಸೇವೆಗೆ 100 ವರ್ಷದ ಇತಿಹಾಸವಿದ್ದು, ತುಳುನಾಡಿನ ಜನತೆಯ ಪ್ರೋತ್ಸಾಹದಿಂದ ದೀರ್ಘಕಾಲದ ಉದ್ಯಮ ನಡೆಸಲು ಸಾಧ್ಯವಾಗಿದೆ. ಬಸ್ ಸಿಬ್ಬಂದಿಯ ದುರ್ವರ್ತನೆ ಕುರಿತು ಜನ ಮಾಧ್ಯಮ ಪ್ರಶ್ನಿಸಿದಾಗ ಕೋಪಗೊಳ್ಳುತ್ತಿದ್ದೆವುಇಂದು ಅದೇ ಮಾಧ್ಯಮ ಸಿಬ್ಬಂದಿಯನ್ನು ಮಾಧ್ಯಮ ಜನ ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಚಾರ. ಸಾರ್ವಜನಿಕ ಸೇವೆಯಲ್ಲಿ ತಪ್ಪುಗಳು ಸಹಜ. ಬಸ್ಸೊಳಗೆ ಇರುವ ಪ್ರಯಾಣಿಕರಿಗೆ ಸಿಬ್ಬಂದಿ ನೋವು ಗೊತ್ತಿರುತ್ತದೆ ಎಂದರು.
ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಮಾತನಾಡಿ, ಸಿಬ್ಬಂದಿ ಕರೆಸಿ ಸನ್ಮಾನಿಸಿರುವುದು ಇದೇ ಮೊದಲು. 6 ಕಿ.ಮೀಯನ್ನು 6 ನಿಮಿಷದಲ್ಲಿ ಕ್ರಮಿಸಿ, ಹಣದ ಕಡೆಗೆ ನೋಡದೆ ಮಾನವೀಯತೆ ತೋರಿಸಿದ ಸಿಬ್ಬಂದಿ ಶ್ಲಾಘನಾರ್ಹರು.ಸಮಸ್ತ ಸಿಬ್ಬಂದಿಗೆ ಸಂದ ಗೌರವ, ಕಿರುಕುಳದ ಹಾನ್೯ ಜೀವ ಉಳಿಸಿದೆ ಎಂದರು .
ಉಪಾಧ್ಯಕ್ಷರುಗಳಾದ ಕೆ.ರಾಮಚಂದ್ರ ನಾಯ್ಕ್, ಜತೆ ಕಾರ್ಯದರ್ಶಿ ರಾಜೇಶ್ ಟಿ, ಪ್ರಧಾನ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಮಾಜಿ ಅಧ್ಯಕ್ಷರುಗಳಾದ ನೆಲ್ಸನ್ ಪಿರೇರಾ, ಬಸ್ ಮಾಲೀಕ ಶ್ರವಣ್ , ಮಾಜಿ ಪ್ರ.ಕಾ ಸುಚೇತನ್ ಕಾವೂರು, ಚಂದ್ರಕಲಾ, ಮೋಹನ್ ಮೆಂಡನ್, ರಾಜೇಂದ್ರ ಶೆಟ್ಟಿ, ಸೇಸಪ್ಪ ಪೂಜಾರಿ, ಇಸ್ಮಾಯಿಲ್, ಅಬ್ಬಾಸ್ ಆಲಿಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles