18.4 C
Karnataka
Wednesday, November 27, 2024

ಸಮಾಜಮುಖಿ ಕಾರ್ಯಗಳಿಗೆ ಸನ್ಮಾನ ಹುಡುಕಿ ಬರುತ್ತೆ: ಡಿಸಿಪಿ ದಿನೇಶ್ ಕುಮಾರ್

ಮಂಗಳೂರು: ಬಸ್ ಸಿಬ್ಬಂದಿ ಮಾನವೀಯ ಕಾರ್ಯಗಳು ಇತರರಿಗೂ ಮಾದರಿ ಆಗಿದ್ದು, ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಗೌರವ, ಸಮ್ಮಾನಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಇಂಹತ ಕಾರ್ಯಗಳಿಗೆ ಬಸ್ ಸಿಬ್ಬಂದಿ ಸಾಕ್ಷಿ ಆಗಿದ್ದಾರೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಬಸ್ ಸಿಬ್ಬಂದಿಗೆ ಸನ್ಮಾನ ಹಾಗೂ ಬಸ್ ಪಾಸ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಮಂಗಳೂರು ನಗರದಲ್ಲಿ ಅನೇಕ ಸಮಸ್ಯೆಗಳಿವೆ. ರಸ್ತೆ ಅಗೆಯುವುದು, ಅಲ್ಲಲ್ಲಿ ಹೊಂಡ ಗುಂಡಿಗಳು, ವಾಹನ ದಟ್ಟಣೆ ಇತ್ಯಾದಿ ಸಮಸ್ಯೆ ನಡುವೆಯೂ ಸಂಚಾರ ನಿಭಾಯಿಸಲು ಸಾರ್ವಜನಿಕರು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಆರ್‌ಟಿಒ ಶ್ರೀಧರ್ ಮಲ್ನಾಡ್ ಅವರು ಮಾತನಾಡಿ, ಬಸ್ ಮಾಲೀಕರು ಸಾರಿಗೆ ಇಲಾಖೆಗೆ ಪ್ರತೀ ತಿಂಗಳು ಎರಡೂವರೆ ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡುತ್ತಿದ್ದು, ನಗರದಲ್ಲಿ ಎರಡನೇ ಅತ್ಯಧಿಕ ತೆರಿಗೆ ಪಾವತಿದಾರರಾಗಿದ್ದಾರೆ. ಬಸ್ ಸಿಬ್ಬಂದಿ ಮಾನವೀಯ ಕಾರ್ಯಗಳು ಸಮಾಜಕ್ಕೆ ಆದರ್ಶ ಎಂದರು.

ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕ್ ಅವರು ಮಾತನಾಡಿ, ಮಂಗಳೂರಿನ ಖಾಸಗಿ ಬಸ್‌ನವರು ಡಿಜಿಟಲ್ ಇಂಡಿಯಾಕ್ಕೆ ಚಾಲನೆ ನೀಡುವ ಮೂಲಕ ರಾಜ್ಯದಲ್ಲೇ ಮೊದಲ ಪ್ರಯತ್ನ ಮಾಡಿದ್ದಾರೆ. ಅದರ ಜತೆಗೆ ಮಾಧ್ಯಮದವರ ಆಗತ್ಯತೆಗೆ ಬಸ್ ಮಾಲೀಕರು ನೆರವಾಗಿರುವುದು ಉತ್ತಮ ಕಾರ್ಯ ಎಂದರು.

ದ.ಕ. ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅವರು ಮಾತನಾಡಿ, ಜಿಲ್ಲೆಯ ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳತ್ತ ಪತ್ರಕರ್ತರು ಬೆಳಕು ಚೆಲ್ಲಬೇಕು. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಖಾಸಗಿ ಬಸ್ ಗಳು ಸ್ಪರ್ಧಾತ್ಮಕ ರೀತಿಯಲ್ಲಿ ಸೇವೆ ನೀಡುತ್ತಿದ್ದು, ಅವರಿಗೆ ಯಾವುದೇ ತೊಂದರೆ ನೀಡದೆ, ಬಸ್ ಸೌಲಭ್ಯವೇ ಇಲ್ಲದ ಕಡೆ ಸರಕಾರಿ ಬಸ್ ವ್ಯವಸ್ಥೆ ಮಾಡಬೇಕು ಎಂದರು.
ಸಮಾರಂಭದಲ್ಲಿ ಸಾಂಕೇತಿಕವಾಗಿ ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ಪಾಸ್ ವಿತರಿಸಲಾಯಿತು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಇದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles