16.7 C
Karnataka
Saturday, November 23, 2024

ಸೈಬರ್ ಕ್ರೈಮ್ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಜಾಗೃತಿ

ಮಂಗಳೂರು: ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ನ ವಿಧಿವಿಜ್ಞಾನ ವಿಭಾಗವು ಸೈಬರ್ ಕ್ರೈಮ್ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಜಾಗೃತಿ ಅಧಿವೇಶನವನ್ನು ನಡೆಸಿತು.
ಪೊಲೀಸ್ ಆಯುಕ್ತ ಅನುಪಮ ಅಗರವಾಲ್, ಅವರು ಮುಖ್ಯ ಅತಿಥಿಯಾಗಿದ್ದರು. ಸೈಬರ್ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಸಾರ್ವಜನಿಕ ಜಾಗೃತಿ ಮತ್ತು ಅಂತರ ವಲಯದ ಸಹಯೋಗದ ಮಹತ್ವವನ್ನು ವಿವರಿಸಿ ಯಾವುದೇ ಸೈಬರ್ ಅಪರಾಧದ ಸಮಸ್ಯೆಗಳ ಸಂದರ್ಭದಲ್ಲಿ 1930 ಅನ್ನು ಸಂಪರ್ಕಿಸಬಹುದು” ಎಂದರು.
ಎಸಿಪಿ ಗೀತಾ ಕುಲಕರ್ಣಿ ಅತಿಥಿಯಾಗಿದ್ದರು. ಯೆನೆಪೊಯ ಡೀಮ್ಡ್ ಟು ಯುನಿವರ್ಸಿಟಿ ಪ್ರೊ ಉಪಕುಲಪತಿ ಡಾ.ಬಿ.ಎಚ್. ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರು ಮತ್ತು ವಿಜ್ಞಾನ ವಿಭಾಗದ ಡೀನ್ ಡಾ.ಅರುಣ್ ಎ.ಭಾಗವತ್, ಉಪಪ್ರಾಂಶುಪಾಲರಾದ ಡಾ.ಶರೀನಾ ಪಿ., ಡಾ.ಜೀವನ್ ರಾಜ್ ಮತ್ತು ನಾರಾಯಣ್ ಸುಕುಮಾರ ಎ. ಮತ್ತು ಡಾ .ರಿಜೆಕ್ಟ್ ಪಾಲ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles