16.7 C
Karnataka
Saturday, November 23, 2024

ಇಂದಿರಾ ಆಸ್ಪತ್ರೆಗೆ 25 ವರ್ಷಗಳ ಸಂಭ್ರಮ

ಮಂಗಳೂರು: “ಆರೋಗ್ಯ ಕ್ಷೇತ್ರದಲ್ಲಿ ತನ್ನ ಉನ್ನತ ಛಾಪನ್ನು ಮೂಡಿಸಿದ ಇಂದಿರಾ ಆಸ್ಪತ್ರೆ 25ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಆ.15ರ೦ದು ರಕ್ತದಾನ, ವಾರ್ಷಿಕೋತ್ಸವ ಆಚರಣೆ ನಡೆಯಲಿದೆ.
ಆ.15 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ನನ್ ಸೆಂಟರ್‌ನಲ್ಲಿ ವಾರ್ಷಿಕೋತ್ಸವ ಆಚರಣೆ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯೆನೆಪೋಯಾ ವಿಶ್ವವಿದ್ಯಾಲಯದಗೌರವ ಕುಲಪತಿ ಡಾ. ಅಬ್ದುಲ್ಲಾ ಕುಂಞ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ನೋಂದಣಾಧಿಕಾರಿ ಡಾ.ರಿಯಾಜ್ ಬಾಷಾ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಸಯ್ಯದ್ ನಿಜಾಮುದ್ದಿನ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು..
1999 ರಲ್ಲಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಸಮುದಾಯಕ್ಕೆ ಉನ್ನತ ಯೋಗಕ್ಷೇಮವನ್ನು ನೀಡುವಲ್ಲಿ ನಿರತವಾಗಿದೆ. ಕಳೆದ ಕಾಲು ಶತಮಾನದಲ್ಲಿ, ಇದು ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ವಿಶಾಲವಾದ ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದಿದೆ ಇಂದಿರಾ ಎಜ್ಯುಕೇಶನಲ್ಟ್ರಸ್ಟ್ – ನರ್ಸಿಂಗ್, ಅಲೈಡ್ ಆರೋಗ್ಯ ಮತ್ತು ಫಿಸಿಯೋಥೆರಪಿ ಕೋರ್ಸ್‌ಗಳನ್ನು ಒಳಗೊಂಡ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ. ಉತ್ತಮ ಆರೋಗ್ಯ ವೃತ್ತಿಪರರನ್ನು ನಿರ್ಮಿಸುವಲ್ಲಿ ತನ್ನ ಬದ್ಧತೆಗೆ ಪ್ರಸಿದ್ಧವಾಗಿದೆ. ಆಸ್ಪತ್ರೆ ತನ್ನ ಯಶಸ್ಸಿಗೆ ಕಾರಣರಾದ ತನ್ನ ನಿಷ್ಠಾವಂತ ಸಿಬ್ಬಂದಿ, ಬೆಂಬಲಿತ ಸಮುದಾಯ ಮತ್ತು ಆರೋಗ್ಯ ಸೇವಾ ಪಾಲುದಾರರಿಗೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂದಿರಾ ಆಸ್ಪತ್ರೆಯು ಸಮುದಾಯಕ್ಕೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮುಂದುವರಿಸಲಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಯ್ಯದ್ ಜಮಾಲುದ್ದಿನ್, ಅಶ್ರಫ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles